ಕತರ್ ವಿರುದ್ಧ ಕಿಡಿಕಾರಿದ ಟ್ರಂಪ್

ವಾಶಿಂಗ್ಟನ್,ಜೂ.10: ಕತರ್ ಹಾಗೂ ಅದರ ನೆರೆ ಹೊರೆಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿರುವ ಬೆನ್ನಲ್ಲೇ ಅವೆುರಿಕ ಅಧ್ಯಕ್ಷ ಟ್ರಂಪ್ ಕತರ್ ವಿರುದ್ಧ ಶನಿವಾರ ಕಿಡಿಕಾರಿದ್ದಾರೆ. ಉಗ್ರವಾದಕ್ಕೆ ಗಲ್ಫ್ ರಾಷ್ಟ್ರವಾದ ಕತರ್ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಅಪಾದಿಸಿರುವ ಅವರು, ದ್ವೇಷವನ್ನು ಬೋಧಿಸುವುದನ್ನು ನಿಲ್ಲಿಸಬೇಕೆಂದು ಆ ದೇಶವನ್ನು ಆಗ್ರಹಿಸಿದ್ದಾರೆ.
ವಾಶಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಕತರ್, ಉಗ್ರವಾದ ಆರ್ಥಿಕ ನೆರವನ್ನು ನೀಡುತ್ತಿರುವ ಇತಿಹಾಸವನ್ನು ಹೊಂದಿದೆ. ಇತ್ತೀಚೆಗೆ ಭಯೋತ್ಪಾದನೆ ವಿರುದ್ಧ ನಡೆದ ಗಲ್ಫ್ ರಾಷ್ಟ್ರಗಳ ಸಮಾವೇಶದ ಬಳಿಕ, ಹಲವು ರಾಷ್ಟ್ರಗಳು ಜೊತೆಗೂಡಿ, ಕತರ್‌ನ ನಡವಳಿಕೆಯ ವಿರುದ್ಧ ಹೋರಾಡುವ ಬಗ್ಗೆ ನನ್ನ್ಡೊಂದಿಗೆ ಮಾತನಾಡಿವೆ’’ಎಂದು ಹೇಳಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರು ಕತರ್ ವಿರುದ್ಧ ನಿರ್ಬಂಧವನ್ನು ಸಡಿಲಗೊಳಿಸುವಂತೆ ಸೌದಿ ಆರೇಬಿಯ ಹಾಗೂ ಅದರ ಜೊತೆಗಾರ ರಾಷ್ಟ್ರಗಳಿಗೆ ಮನವಿ ಮಾಡಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಕತರ್ ವಿರುದ್ಧ ನಿರ್ಬಂಧ ವಿಧಿಸುವುದರಿಂದ , ಆ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಹಾಗೂ ಐಸಿಸ್ ವಿರುದ್ಧ ಹೋರಾಟಕ್ಕೆ ಹಿನ್ನಡೆಯುಂಟಾಗಲಿದೆಯೆಂದು ಟಿಲ್ಲರ್‌ಸನ್ ಆತಂಕ ವ್ಯಕ್ತಪಡಿಸಿದ್ದರು.





