ಯೂತ್ ಕಾಂಗ್ರೆಸ್ ನ ರೈಲ್ ರೋಕೋ ವಿಫಲ: ಕಾರ್ಯಕರ್ತರ ಬಂಧನ, ಬಿಡುಗಡೆ

ಭಟ್ಕಳ, ಜೂ. 10: ಮಧ್ಯ ಪ್ರದೇಶ ಸರ್ಕಾರ ರೈತರ ಮೇಲಿನ ಗೋಲಿಬಾರ್ ಘಟನೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ರೈತರ ಸಾಲ ಮನ್ನಾ ಮಾಡದಿರುವುದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲಾ ಯುತ್ ಕಾಂಗ್ರೆಸ್ ನಿಂದ ಶನಿವಾರ ಮುರುಡೇಶ್ವರದಲ್ಲಿ ಹಮ್ಮಿಕೊಂಡಿದ್ದ ರೈಲ್ ರೋಕೊ ಕಾರ್ಯಕ್ರಮವನ್ನು ಪೊಲೀಸ್ ವಿಫಲಗೊಳಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಕೇಂದ್ರದ ಎನ್.ಡಿ.ಎ. ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದೆ ಕೇವಲ ಉದ್ಯಮಿಗಳನ್ನು ಮಾತ್ರ ಸಂತೋಷ ಪಡಿಸುತ್ತಿದೆ. ರೈತರ ಹಾಗೂ ಬಡಜನತೆಯ ಸಂಕಷ್ಟಗಳನ್ನು ಅರ್ಥೈಸಿಕೊಳ್ಳದ ದೇಶದ ಪ್ರಧಾನಿ ಕೇವಲ ಭಾಷಣ ಹಾಗೂ ಅಶ್ವಾಸನೆಗಳಲ್ಲಿಯೆ ಕಾಲ ಕಳೆದಿದ್ದಾರೆ ಎಂದು ಉತ್ತರ ಕನ್ನಡ ಯುತ್ ಕಾಂಗ್ರೆಸ್ ಅಧ್ಯಕ್ಷ ಸಂತೋಶ್ ಶೆಟ್ಟಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ರೈಲ್ ರೋಕೋ ತಡೆಯಲು ನುಗ್ಗಿದ ಕಾರ್ಯಕರ್ತರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಹಾಗೂ ರೈಲ್ವೆ ಪೊಲೀಸ್ ಪಡೆ ತಡೆದು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ ಸೇರಿದಂತೆ ಯುತ್ ಕಾಂಗ್ರೆಸ್ ಜಿಲ್ಲಾ ಪ್ರ.ಕಾ ಲಕ್ಷ್ಮಣ ನಾಯ್ಕ, ನಿತಿನ್ ರಾಯ್ಕರ್, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಝರುದ್ದೀನ್ ಮೂಸಾ, ಕರುಣೇಶ ಅಂಗಡಿ ಸೇರಿದಂತೆ ಹಲವರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಡಿ.ವೈಎಸ್ಪಿ ಶಿವಕುಮಾರ್, ಸಿಪಿಐ ಸುರೇಶ ನಾಯಕ, ರೈಲ್ವೆ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಸತಿಶನ್, ಶಿವರಾಮ್ ರಾಥೋಡ್, ವಿನೋದ್ ಕುಮಾರ್, ಭಟ್ಕಳ ರೇಲ್ವೆ ಪಿ.ಎಸ್.ಐ ಎಸ್.ಎಸ್.ದಯಾಲ್ ಸೂಕ್ತ ಬಂದೋಬಸ್ತ್ ವಹಿಸಿದ್ದರು.







