ಉಳ್ಳಾಲ: ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಖಾದರ್ ಭೇಟಿ

ಉಳ್ಳಾಲ,ಜೂ.10; ಕಡಲ್ಕೊರೆತದಿಂದ ಹಾನಿಯಾಗಿರುವ ಉಳ್ಳಾಲ ವ್ಯಾಪ್ತಿಯ ಕೈಕೋ, ಕಿಲೇರಿಯಾನಗರಕ್ಕೆ ಶನಿವಾರ ಸಚಿವ ಯು.ಟಿ.ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕಡಲ್ಕೊರೆತದಿಂದ ಅಪಾಯದಲ್ಲಿರುವ ಕೈಕೋ, ಕಿಲೇರಿಯಾನಗರ, ಸೋಮೇಶ್ವರ ಉಚ್ಚಿಲದಲ್ಲಿ ತಾತ್ಕಾಲಿಕ ಕಲ್ಲು ಹಾಕುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದು, ಈ ಪ್ರದೇಶದಲ್ಲಿ ಬಂದರು ಇಲಾಖೆಯ ಇಂಜಿನಿಯರ್‌ಗಳು ಪ್ರತೀದಿನ ಸರ್ವೇಕ್ಷಣೆ ನಡೆಸಲಿದ್ದು ಕಡಲ್ಕೊರೆತವಾದರೆ ತುರ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಕೈಕೋದಲ್ಲಿ ಮನೆಯೊಂದಕ್ಕೆ ಹಾನಿಯಾಗಿದ್ದು, ಪ್ರಕೃತಿ ವಿಕೋಪದಡಿ ಸಿಗುವ ಧನಸಹಾಯವನ್ನು ನೀಡಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಉಳ್ಳಾಲ ನಗರಸಭೆಯ ಅಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಡಲ್ಕೊರೆತ ಆಗುತ್ತಿರುವ ಈ ಪ್ರದೇಶದಲ್ಲಿಯೂ ಶಾಶ್ವತ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ತರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯರಾದ ಮಹಮ್ಮದ್ ಮುಸ್ತಾಫ, ಹನೀಫ್ ಕೋಟೆಪುರ ಮೊದಲಾದವರು ಉಪಸ್ಥಿತರಿದ್ದರು.







