ಆರ್ಚರಿ ವಿಶ್ವಕಪ್: ಪ್ಲೇ-ಆಫ್‌ನಲ್ಲಿ ಮುಗ್ಗರಿಸಿದ ಭಾರತ

ಅಂಟಲಿಯಾ, ಜೂ.10: ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಫ್ರೆಂಚ್ ಆಟಗಾರರ ವಿರುದ್ಧ ಸೋತಿರುವ ಭಾರತದ ಪುರುಷರ ಕಾಂಪೌಂಡ್ ತಂಡ ಎರಡನೆ ಹಂತದ ಆರ್ಚರಿ ವಿಶ್ವಕಪ್‌ನಿಂದ ಬರಿಗೈಯಲ್ಲಿ ವಾಪಸಾಗಿದೆ.
ಕಳೆದ ತಿಂಗಳು ನಡೆದಿದ್ದ ಮೊದಲ ಹಂತದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅಭಿಷೇಕ್ ವರ್ಮ, ಚಿನ್ನಾ ರಾಜು ಹಾಗೂ ಗುರ್ವಿಂದರ್ ಸಿಂಗ್ ಅವರಿದ್ದ ಭಾರತದ ಪುರುಷರ ಕಾಂಪೌಂಡ್ ತಂಡದ ಮೇಲೆ ಭಾರೀ ವಿಶ್ವಾಸ ಇಡಲಾಗಿತ್ತು. ಆದರೆ ಪೀರ್-ಜುಲಿಯೆನ್ ಡೆಲೊಚ್, ಡೊಮಿನಿಕ್ ಗೆನೆಟ್ ಹಾಗೂ ಫ್ಯಾಬಿಯೆನ್ ಡೆಲೊಬೆಲ್ ವಿರುದ್ಧ 227-228 ಅಂತರದಿಂದ ವೀರೋಚಿತ ಸೋಲುಂಡಿತು. ದಿವ್ಯಾ, ಜ್ಯೋತಿ ಹಾಗೂ ಸ್ನೇಹಲ್ ಅವರಿದ್ದ ಮಹಿಳೆಯರ ಕಾಂಪೌಂಡ್ ತಂಡ ಕೂಡ ಇಟಲಿಯ ವಿರುದ್ಧ 222-227 ಅಂತರದಿಂದ ಸೋತ ಹಿನ್ನೆಲೆಯಲ್ಲಿ ಭಾರತ ಸತತ ಸೋಲು ಕಂಡಿತು.
Next Story





