ಪಂಜಿಮೊಗರಿನಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿ, ಇನ್ನೊಂದು ಮನೆ ಅಪಾಯದಲ್ಲಿ

ಮಂಗಳೂರು, ಜೂ.11: ಕರಾವಳಿಯಲ್ಲಿ ಮಳೆಯಬ್ಬರ ಜೋರಾಗಿದ್ದು, ಅಲ್ಲಲ್ಲಿ ಗಾಳಿಮಳೆಗೆ ಹಾನಿ ಉಂಟಾಗಿರುವುದು ವರದಿಯಾಗುತ್ತಿದೆ.
ನಗರ ಹೊರವಲಯದ ಪಂಜಿಮೊಗರಿನ ಉರುಂಡಾಡಿ ಎಂಬಲ್ಲಿ ಕಾಂಕ್ರಿಟ್ ತಡೆ ಗೋಡೆಯೊಂದು ಕುಸಿದ ಪರಿಣಾಮ ಮನೆಯೊಂದು ಜಖಂಗೊಂಡಿದ್ದು, ಇನ್ನೊಂದು ಅಪಾಯದಲ್ಲಿರುವುದು ವರದಿಯಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉರುಂಡಾಡಿಯಲ್ಲಿ ಕಾಂಕ್ರಿಟ್ ತಡೆಗೋಡೆಯೊಂದು ಕುಸಿದಿದೆ. ಇದರಿಂದ ಫ್ರಾನ್ಸಿಸ್ ಎಂಬವರ ಮನೆ ಜಖಂಗೊಂಡಿದೆ. ಈ ಮನೆಯ ಪಕ್ಕದಲ್ಲಿರುವ ಬಾಲಕೃಷ್ಣ ಎಂಬವರ ಮನೆ ಅಪಾಯದಲ್ಲಿದೆ.
ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇಂದು ಕೂಡಾ ಮಳೆಯಬ್ಬರ ಮುಂದುವರಿದಿದೆ.
Next Story





