ಅಡಗುದಾಣದಲ್ಲಿರುವ ಭಯೋತ್ಪಾದಕರ ಪತ್ತೆ ಗೆ ವಾಲ್ ರಾಡಾರ್
.jpg)
ಹೊಸದಿಲ್ಲಿ, ಜೂ11: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಅಡಗುದಾಣದಲ್ಲಿರುವ ಭಯೋತ್ಪಾದಕರನ್ನು ಪತ್ತೆ ಮಾಡಲು ವಾಲ್ ರಾಡಾರ್ ಗಳನ್ನು ಬಳಕೆ ಮಾಡಲಿದೆ. ನಿರ್ಧರಿಸಿದೆ.
ವಾಲ್ ರಾಡಾರ್ ಸಿಸ್ಟಮ್ ಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ನಿಂದ ಆಮದು ಮಾಡಿಕೊಂಡಿರುವುದಾಗಿ ಹೇಳಿದೆ.
ವಾಲ್ ರಾಡಾರ್ ವ್ಯವಸ್ಥೆ ಉಗ್ರರನ್ನು ಪತ್ತೆ ಮಾಡಲು ಸೇನಾ ಪಡೆಗಳಿಗೆ ಸಹಕಾರಿಯಾಗಲಿದೆ.
ದಿವ್ಯಚಕ್ಷು ಎಂಬ ಹೆಸರಿನ ಪೋರ್ಟಬಲ್ ರಾಡಾರ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಒಂದು ಕೈಲಿಟ್ಟುಕೊಂಡು ಬಳಕೆ ಮಾಡಬಹುದಾದ ರಾಡಾರ್ ಮತ್ತೊಂದು ಟ್ರೈಪಾಡ್ ಹೊಂದಿರುವ ರಾಡಾರ್ . ಹ್ಯಾಂಡ್ ಹೆಲ್ಡ್ ರಾಡಾರ್ ಗಳು 20 ಮೀಟರ್ ದೂರದ ವರೆಗೆ ಗೋಡೆಯ ಒಳಭಾಗದಲ್ಲಿರುವ ಚಿತ್ರಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ.
ಟ್ರೈಪಾಡ್ ಹೊಂದಿರುವ ರಾಡಾರ್ ಗಳು 40 ಮೀಟರ್ ದೂರದ ವರೆಗೆ ಗೋಡೆಯ ಒಳಭಾಗದಲ್ಲಿರುವ ಚಿತ್ರಗಳನ್ನು ತೆಗೆಯಲಿದೆ ಎಂದು ತಿಳಿದು ಬಂದಿದೆ.
ಡಿಆರ್ ಡಿಒ ರಾಡರ್ ಬೆಲೆ 35 ಲಕ್ಷ ರೂ, ಆಮದುಮಾಡಿಕೊಳ್ಳಳಾಗುವ ರಾಡರ್ ಬೆಲೆ 2 ಕೋಟಿ ರೂ . ಎಂದು ತಿಳದು ಬಂದಿದೆ.





