ಮಂಗಳೂರು ಕ್ಷೇತ್ರ ವ್ಯಾಪ್ತಿಯ 15 ರಸ್ತೆಗೆ ಅನುದಾನ ಮಂಜೂರು: ಸಚಿವ ಖಾದರ್

ಗಳೂರು, ಜೂ.11: ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15 ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಗಾಂಧಿಪಥ ಗ್ರಾಮಪಥ ಯೋಜನೆ (ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ-4)ಯಡಿ ಕಂಚಿಲ-ಮಯ್ಯಲ ರಸ್ತೆ, ಮೇರಮಜಲು-ಪಾಕಲ ಪಾದೆ ರಸ್ತೆಗೆ ಸೇತುವೆ ನಿರ್ಮಾಣ, ಹೊಗೆ-ಚೇಳೂರು ಕಾಂಕ್ರಿಟ್ ರಸ್ತೆ ರಚನೆ, ಮೇರಮಜಲು -ಪಾಕಲ ಪಾದೆ ಕಾಂಕ್ರಿಟ್ ರಸ್ತೆ ರಚನೆ, ಮುಡಿಪು-ಪಾಂಡ್ಯಕಲ್ಲು ಹರಿಜನ ಕಾಲನಿ ರಸ್ತೆ ರಚನೆ, ವಿಜಯನಗರ-ಕಲ್ಕಟ್ಟ ರಸ್ತೆ ರಚನೆ, ಕುರ್ನಾಡು ಮದ್ಯನಡ್ಕ ರಸ್ತೆ ರಚನೆ, ಅಸೈಗೋಳಿ-ಸಾಮಣಿಗೆ ರಸ್ತೆ ಅಭಿವೃದ್ಧಿ, ಮಂಜನಾಡಿ-ನಾಟೆಕಲ್ ಆಸ್ಪತ್ರೆ ರಸ್ತೆ ಕಾಂಕ್ರಿಟೀಕರಣ, ಕೊಣಾಜೆ-ಪುರುಷರ ಕೋಡಿ ರಸ್ತೆ ರಚನೆ, ಪಾಣೇಲ-ಪಜೀರ್ ರಸ್ತೆ ಅಭಿವೃದ್ಧಿ, ಕಿನ್ಯ-ಉಕ್ಕಡ ಪಾರೆ-ಮೀನಾದಿ ಕಾಂಕ್ರಿಟ್ ರಸ್ತೆ ರಚನೆ, ಪೆರಂಡೆ-ಅಡ್ಕರೆಪದವು ದೇರಳಕಟ್ಟೆ ರಸ್ತೆ ಅಭಿವೃದ್ಧಿ, ಪಾಣೇಲ-ಗುಂಡ್ಯ ಹರಿಜನ ಕಾಲನಿ ರಸ್ತೆ ಕಾಂಕ್ರಿಟೀಕರಣ, ಮೂಳೂರು-ಬಂಗಾರಗುಡ್ಡೆ ಹರಿಜನ ಕಾಲನಿ ಕಾಂಕ್ರಿಟೀಕರಣ ರಸ್ತೆ ರಚನೆ ಹೀಗೆ 25,28.92 ಕೋ.ರೂ. ವೆಚ್ಚದಲ್ಲಿ 23.18 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಖಾದರ್ ತಿಳಿಸಿದರು.





