ಬಸ್ ಪಲ್ಟಿ; 9 ಪ್ರಯಾಣಿಕರ ಸಾವು

ಲಾತೂರ‍್ , ಜೂ.11: ಪುಣೆಯಿಂದ ಲಾತೂರ್‌ಗೆ ಸಾಗುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು 22 ಮಂದಿ ಗಂಭೀರ ಗಾಯಗೊಂಡ ಘಟನೆ ಬೀಡ್ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ
ಮುಂಬೈನಿಂದ ಲಾತೂರ್‌ಗೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದ ಪರಿಣಾಮವಾಗಿ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ಇನ್ನೊಬ್ಬರು ಅಹ್ಮದ್ ನಗರ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಗಾಯಗೊಂಡವರನ್ನು ಅಹ್ಮದ್‌ನಗರ್ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ.
Next Story





