ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಪೊಯೆಸ್ ಗಾರ್ಡನ್ ಪ್ರವೇಶ ಯತ್ನ ವಿಫಲ

ಚೆನ್ನೈ, ಜೂ.11: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜಯಲಲಿತಾರ ಚೆನ್ನೈನ ಪೊಯೆಸ್ ಗಾರ್ಡನ್ ನಲ್ಲಿರುವ ಮನೆಗೆ ಅವರ ಸೊಸೆ ದೀಪಾ ಜಯಕುಮಾರ್ ಪ್ರವೇಶಿಸಲು ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ಧಾರೆ.
ಇಂದು ಬೆಳಗ್ಗೆ ತನ್ನ ಬೆಂಬಲಿಗರೊಂದಿಗೆ ಜಯಲಿತಾ ಸಹೋದರನ ಮಗಳು ದೀಪಾ ಜಯಕುಮಾರ್ ಪೊಯೆಸ್ ಗಾರ್ಡನ್ ನಲ್ಲಿರುವ ವೇದಾ ನಿಲಯಂಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ಸಂಭವಿಸಿದ ನೂಕುನುಗ್ಗಲಿ ನಲ್ಲಿ ಹಲವು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ.
ಸುಮಾರು 40 ವರುಷಗಳ ತನಕ ಜಯಲಲಿತಾ ಪೊಯೆಸ್ ಗಾರ್ಡನ್ ನ ನಿವಾಸದಲ್ಲಿ ವಾಸವಾಗಿದ್ದರು. ಜಯಲಲಿತಾ ನಿಧನದ ಬಳಿಕ ಅವರ ಸ್ನೇಹಿತೆ ಶಶಿಕಲಾ ನಟರಾಜನ್ ವಾಸವಾಗಿದ್ದರು. ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲು ಸೇರಿದ ಬಳಿಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಈ ಮನೆಯನ್ನು ಪಕ್ಷದ ಮತ್ತು ಸಚಿವರ ಸಭೆ ನಡೆಸಲು ಬಳಸುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಮನೆ ಖಾಲಿಯಾಗಿದೆ ಮನೆಯ ಕಾವಲಿಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಳು ಮಾತ್ರ ಇದ್ದಾರೆ.
ಜಯಲಲಿತಾ ಅವರ ಆಸ್ತಿಗಾಗಿ ಇದೀಗ ಜಯಲಲಿತಾ ಅವರ ಸೋದರ ನ ಮಕ್ಕಳಾದ ದೀಪಾ ಜಯಕುಮಾರ್ ಮತ್ತು ದೀಪಕ್ ಅವರು ಹೋರಾಟ ಆರಂಭಿಸಿದ್ದಾರೆ. ದೀಪಕ್ ಕುಮಾರ್ ಅವರು ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ನಡುವೆ ಜಯಲಲಿತಾರ ಆಸ್ತಿಗೆ ಉತ್ತರಾಧಿಕಾರಿ ವಿವಾದ ತೀವ್ರಗೊಂಡಿದೆ “ತನ್ನನ್ನು ಪೊಯೆಸ್ ಗಾರ್ಡನ್ ನಿಂದ ಹೊರಬ್ಬಲಾಗಿದೆ. ಸೋದರ ಜಯಕುಮಾರ್ ಅವರು ಶಶಿಕಲಾ ಬಣದ ಜೊತೆ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂದು ದೀಪಾ ಜಯಕುಮಾರ್ ಆರೋಪಿಸಿದರು..





