ಹರೇಕಳ, ಕುತ್ತಾರಿನಲ್ಲಿ ಮಳೆ ಹಾನಿ

ಕೊಣಾಜೆ, ಜೂ.11: ಕರಾವಳಿಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಯೊಂದಿಗೆ ಗಾಳಿ ಬೀಸುತ್ತಿದ್ದು, ಹರೇಕಳ, ಕುತ್ತಾರಿನಲ್ಲಿ ಹಾನಿ ಸಂಭವಿಸಿರುವುದು ವರದಿಯಾಗಿದೆ.
ಗಾಳಿ ಮಳೆಗೆ ಹರೇಕಳ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಕೆಲಹೊತ್ತು ತೊಡಕುಂಟಾಗಿತ್ತು. ಬಳಿಕ ಸ್ಥಳೀಯರು ಮರವನ್ನು ಕಡಿದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಇಂದು ಸುರಿದ ಭಾರೀ ಮಳೆಗೆ ಹರೇಕಳ ಕಡವಿನ ಬಳಿಯ ಪದ್ಮಾವತಿ ಎಂಬವರ ಮನೆಯ ತಡೆಗೋಡೆಯು ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕಳೆದ ತಿಂಗಳಷ್ಟೇ ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಈ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.
ಕುತ್ತಾರು ಸಮೀಪದ ಕೋಡಿಮನೆ ಕಿಶೋರ್ ಕೊಟ್ಟಾರಿ ಎಂಬವರ ಮನೆಯ ಮುಂಭಾಗದ ಆವರಣ ಗೋಡೆ ರವಿವಾರ ಕುಸಿದಿದೆ.
Next Story





