ಆಳ್ವಾಸ್: ವಿದ್ಯಾರ್ಥಿಗಳಿಂದ ಧ್ವನಿವರ್ಧಕ ಕೊಡುಗೆ

ಮೂಡುಬಿದಿರೆ, ಜೂ. 11: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನ (ಬಿಎನ್‌ವೈಎಸ್) ವಿದ್ಯಾರ್ಥಿಗಳು ನುಡಿಸಿರಿ ಸಂದರ್ಭದಲ್ಲಿ ನಡೆಸಿದ ಚಿಕಿತ್ಸಾ ವಿಧಾನದಲ್ಲಿ ಗಳಿಸಿದ ಹಣದಿಂದ ಧ್ವನಿ ವರ್ಧಕಗಳನ್ನು ಖರೀದಿಸಿದ್ದು, ಮಿಜಾರಿನಲ್ಲಿರುವ ಬಂಗಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅದನ್ನು ಕೊಡುಗೆಯಾಗಿ ನೀಡಲಾಗಿದೆ.
ಧ್ವನಿವರ್ಧಕ ಹಸ್ತಾಂತರ ಕಾರ್ಯಕ್ರಮದಲ್ಲಿ ಡಾ. ವನಿತಾ ಎಸ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ತೆಂಕಮಿಜಾರು ಗ್ರಾಮ ಪಂ. ಸದಸ್ಯ ಗೋಪಾಲ, ಡಾ. ದೀಪಕ್, ಬಂಗಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ನಾರಾಯಣ, ಜೆಡಿಎಸ್ ಮುಖಂಡ ದಿವಾಕರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್, ಆಳ್ವಾಸ್‌ನ ವಿದ್ಯಾರ್ಥಿನಿಯರಾದ ಅಂಬಿಕಾ, ಸ್ವಪ್ನಾ ರೈ ಉಪಸ್ಥಿತರಿದ್ದರು.
Next Story





