ವಸತಿ ರಹಿತರ ಆಶ್ರಯದ ಶಾಶ್ವತ ಕಟ್ಟಡ ಉದ್ಘಾಟನೆ

ಉಡುಪಿ, ಜೂ.11: ಉಡುಪಿ ನಗರಸಭೆಯ ವತಿಯಿಂದ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ(ಡೇ -ನಲ್ಮ್)ಯ ನಗರ ವಸತಿ ರಹಿತರಿಗೆ ಆಶ್ರಯ ಉಪ ಘಟಕ ದಡಿ ಉಡುಪಿ ಬೀಡಿನಗುಡ್ಡೆಯಲ್ಲಿ ಸುಮಾರು 40ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿ ರಹಿತರ ಆಶ್ರಯದ ಶಾಶ್ವತ ಕಟ್ಟಡವನ್ನು ಜಿಲ್ಲಾ ಉಸ್ತು ವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಇಲ್ಲಿರುವ ಎರಡು ಹಾಲ್‌ಗಳಲ್ಲಿ ಮಹಿಳೆ ಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. 34 ಪುರುಷರು ಹಾಗೂ 14 ಮಹಿಳೆಯರು ಉಳಿದುಕೊಳ್ಳಲು ಇಲ್ಲಿ ಅವಕಾಶ ಇದೆ. ಇಲ್ಲಿಗೆ ಇನ್ನಷ್ಟು ಮೂಲ ಭೂತ ಸೌಕರ್ಯಗಳು ಬೇಕಾಗಿದ್ದು, ಅದನ್ನು ಸರಕಾರ ಅಥವಾ ದಾನಿಗಳ ನೆರವಿ ನಿಂದ ಒದಗಿಸಲಾಗುವುದು. ಸರಕಾರ ಮಟ್ಟದಲ್ಲಿ ಇದರ ನಿರ್ವಹಣೆ ಕಷ್ಟವಾಗುವುದರಿಂದ ಎನ್‌ಜಿಒಗಳಿಗೆ ವಹಿಸಿಕೊಡಲು ನಿರ್ಧರಿಸಲಾಗಿದೆ. ರಸ್ತೆ ಬದಿ, ಬಸ್ ನಿಲ್ದಾಣಗಳಲ್ಲಿರುವ ನಿರಾಶಿತರು ಇಲ್ಲಿ ಆಶ್ರಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ರಾದ ಯುವರಾಜ್, ಶಶಿರಾಜ್ ಕುಂದರ್, ಶಾಂತರಾಮ ಸಾಲ್ವಂಕರ್, ಜನಾರ್ದನ ಭಂಡಾರ್ಕರ್, ಪೌರಾಯುಕ್ತ ಡಿ.ಮಂಜುನಾಥಯ್ಯ, ಇಂಜಿನಿ ಯರ್ ಗಣೇಶ್, ಗುತ್ತಿಗೆದಾರ ಬಾಬು ರಾವ್ ಮೊದಲಾದವರು ಉಪಸ್ಥಿತರಿ ದ್ದರು.





