ಮಂಗಳೂರು: ‘ಸೇವರಿ ರೆಸ್ಟೋರೆಂಟ್’ನಲ್ಲಿ ರಮಝಾನ್ ಸ್ಪೆಷಲ್
ಅರೆಬಿಯನ್, ಹೈದರಾಬಾದಿ, ಮಂಗಳೂರು, ಕೇರಳ ಶೈಲಿಯ ಸ್ವಾದಿಷ್ಟಕರ ಖಾದ್ಯ

ಮಂಗಳೂರು, ಜೂ.11: ಬೆಂಗಳೂರಿನ ಪ್ರೆಝರ್ ಟೌನ್‌ನಲ್ಲಿರುವ ‘ಸೇವರಿ ರೆಸ್ಟೋರೆಂಟ್’ನ ಮಂಗಳೂರು ಶಾಖೆಯು ನಗರದ ಸಿಟಿ ಸೆಂಟರ್‌ನಲ್ಲಿದ್ದು, ಅರೆಬಿಕ್ ಶೈಲಿಯ, ಉತ್ತರ-ದಕ್ಷಿಣ ಭಾರತೀಯ ಹಾಗೂ ಚೈನೀಸ್ ಮಾದರಿಗೆ ಇದು ಹೆಸರು ವಾಸಿಯಾಗಿದೆ. ಇದೀಗ ಇಲ್ಲಿ ರಮಝಾನ್ ಹಬ್ಬದ ವಿಶೇಷವಾಗಿ ‘ಇಫ್ತಾರ್’ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 4 ಗಂಟೆಯಾಗುತ್ತಲೇ ರೆಸ್ಟೋರೆಂಟ್‌ನ ಮುಂದೆ ಡೆಮೋ ಮಾದರಿಯಲ್ಲಿ ಶೆಫ್‌ಗಳು ಅರೆಬಿಯನ್, ಹೈದರಾಬಾದಿ, ಮಂಗಳೂರು ಮತ್ತು ವಿಶೇಷವಾಗಿ ಕೇರಳ ಶೈಲಿಯ ಶುಚಿ-ರುಚಿಯಾದ ಖಾದ್ಯಗಳ ತಯಾರಿಯಲ್ಲಿ ತೊಡಗುತ್ತಾರೆ. ಅಸರ್ ನಮಾಝ್ ಬಳಿಕ ಅವುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದು, ಮುಸ್ಲಿಮೇತರರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಾಗಿರುವುದು ಗಮನಾರ್ಹ. ರಾತ್ರಿ 8 ಗಂಟೆಯವರೆಗೂ ರಮಝಾನ್ ಸ್ಪೆಷಲ್ ಖಾದ್ಯಗಳು ಇಲ್ಲಿ ಲಭ್ಯವಿದೆ.
ಹೈದರಾಬಾದ್ ಬಿರಿಯಾನಿ ಮತ್ತು ಹಲೀಮ್ ಇಲ್ಲಿನ ವಿಶೇಷ. ಗ್ರಾಹಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದರ ರುಚಿಯನ್ನು ಸವಿಯುತ್ತಿದ್ದಾರೆ. ಜೊತೆಗೆ ಚಿಕನ್‌ನಲ್ಲಿ ಬಾರ್ಬಿಕ್ಯು, ಪೆಪ್ಪರ್ ಬಾರ್ಬಿಕ್ಯು, ಅಲ್ ಫಹಾಮ್ ಕೂಡಾ ಇದೆ. ಅದಲ್ಲದೆ ಚಿಕನ್, ಮಟನ್, ಸಸ್ಯಹಾರಿಯ ಅರಬಿಯನ್ ಮುಶಕ್ಕರ್ ಕೂಡ ಲಭ್ಯವಿದೆ. ಮುಹಲ್ಲಬಿಯ ಎಂಬ ಹೆಸರಿನ ಅರೆಬಿಕ್ ಸ್ಟೀಟ್ಸ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೆ ಮ್ಯಾಂಗೋ ವಿದ್ ವೆನಿಲ್ಲಾ, ಮ್ಯಾಂಗೋ ಸ್ಟ್ರಾಬರಿ ಕೂಡ ಇದೆ.
ಕೇರಳದ ಚನ್ನಚಾಟ್, ಸ್ವೀಟ್ ಬನಾನಾ, ಫಝಮ್ ಪೂರಿ, ಫತೇಯರ್, ಸ್ಪ್ರಿಂಗ್ ರೋಲ್, ಬ್ರೆಡ್ ಚಿಕನ್ ಪಪ್ಸ್, ಚಿಕನ್ ಕಟ್ಲೆಟ್, ಚಿಕನ್ ಸಮೋಸಾ, ಪಕೋಡಾ ಕೂಡ ಇಲ್ಲಿದೆ. ಇನ್ನು ಅರೆಬಿಯನ್ ಮತ್ತು ಮ್ಯಾಕ್ಸಿಕಂ ಶವರ್ಮವೂ ಇದೆ. ಈ ಎಲ್ಲ ಖಾದ್ಯಗಳಿಗೆ ಉಪ್ಪು ಬೆರಸಿದ ಬೀಟ್‌ರೋಟ್, ಗ್ರೀನ್ ಚಿಲ್ಲಿ, ಬಟಾಟೆ, ಮುಳ್ಳುಸೌತೆಯ ಸಣ್ಣ ಸಣ್ಣ ತುಂಡುಗಳನ್ನು ಪ್ಯಾಕೆಟ್‌ನಲ್ಲಿ ಹಾಕಿ ಕೊಡಲಾಗುತ್ತದೆ. ಇದು ಖಾದ್ಯಗಳ ರುಚಿಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಇಲ್ಲಿನ ಶೆಫ್‌ಗಳು ಹೇಳುತ್ತಾರೆ.
ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಗ್ರಾಹಕರು ಡೆಮೋ ಒಳಗೆ ನುಗ್ಗಿ ಬಿಸಿಬಿಸಿಯಾದ ಖಾದ್ಯಗಳನ್ನು ಚಪ್ಪರಿಸಲು ತುದಿಗಾಲಲ್ಲಿ ನಿಲ್ಲುವುದು ಕಂಡು ಬರುತ್ತದೆ.
ಯಶಸ್ವಿ ಉದ್ಯಮಿ ಕುಂಞಿ ಮೂಸಾ ಅವರ ಮಾಲಕತ್ವದ ‘ಸೇವರಿ ರೆಸ್ಟೋರೆಂಟ್’ ನಲ್ಲಿ ಸಿಹಿ, ಖಾರ, ಖಾದ್ಯ, ತಂಪು ಎಂದೆಲ್ಲಾ ಸುಮಾರು 38 ಬಗೆಯ ಆಹಾರಗಳು ಲಭ್ಯವಿದೆ. ರಮಝಾನ್ ವಿಶೇಷವಾಗಿ ಸುಮಾರು 50 ಮಂದಿಗೆ ಕುಳಿತು ಇಫ್ತಾರ್ ತೊರೆಯುವ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ.
ಹೈದರಾಬಾದ್‌ನ ಹಲೀಮ್, ಬಿರಿಯಾನಿ ಇಲ್ಲಿನ ವಿಶೇಷವಾಗಿದ್ದು, ಮುಸ್ಲಿಮರು ಮಾತ್ರವಲ್ಲ ಇತರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದರ ರುಚಿ ಸವಿಯುತ್ತಿದ್ದಾರೆ ಎಂದು ‘ಸೇವರಿ ರೆಸ್ಟೋರೆಂಟ್’ನ ನಿರ್ದೇಶಕ ಮುಹಮ್ಮದ್ ಆಸೀಫ್ ಹೇಳಿದರು.