15ನೆ ಗ್ರಾಂಡ್ ಸ್ಲಾಮ್ ಜಯಿಸಿದ ನಡಾಲ್

ಪ್ಯಾರಿಸ್, ಜೂ.11: ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಸ್ಪೇನ್‌ನ ರಫೆಲ್ ನಡಾಲ್ ಪ್ರಶಸ್ತಿ ಗೆಲ್ಲುವ ಮೂಲಕ 15ನೆ ಗ್ರಾಂಡ್ ಸ್ಲಾಮ್ ಮುಡಿಗೇರಿಸಿ ಟೆನಿಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನಡಾಲ್ ಅವರು ಇಂದು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್ನ ಸ್ಟಾನ್ ಸ್ಲಾಸ್ ವಾವ್ರಿಂಕಾ ವಿರುದ್ಧ 6-2, 6-3, 6-1 ಅಂತರದಲ್ಲಿ ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 14 ಗ್ರಾಂಡ್ ಸ್ಲಾಮ್ ಜಯಿಸಿದ ಪೀಟ್ ಸ್ಯಾಂಪ್ರಸ್ ದಾಖಲೆಯನ್ನು ನಡಾಲ್ ಮುರಿದರು.
Next Story





