ಹ್ಯಾರಿಸನ್ -ವಿನುಸನ್‌ಗೆ ಡಬಲ್ಸ್ ಕಿರೀಟ

ಪ್ಯಾರಿಸ್, ಜೂ.11: ಅಮೆರಿಕದ ರ್ಯಾನ್ ಹ್ಯಾರಿಸನ್ ಮತ್ತು ನ್ಯೂಝಿಲೆಂಡ್‌ನ ಮೈಕಲ್ ವೀನಸ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ಧಾರೆ.
ಇಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಹ್ಯಾರಿಸನ್ ಮತ್ತು ಮೈಕಲ್ ವೀನಸ್ ಅವರು ಮೆಕ್ಸಿಕೊದ ಸಾಂಟಿಯಾಗೊ ಗೊಂಝಾಲೆಝ್ ಮತ್ತು ಅಮೆರಿಕದ ಡೊನಾಲ್ಡ್ ಯಂಗ್ ಅವರನ್ನು 7-6(5), 6-7(4), 6-3 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇದರೊಂದಿಗೆ ಹ್ಯಾರಿಸನ್ ಮತ್ತು ವೀನಸ್ ಮೊದಲ ಬಾರಿ ಪ್ರಮುಖ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಕ್ವಾರ್ಟರ್ ಫೈನಲ್ ತಲುಪಿರುವುದು ಹಿಂದಿನ ಟೂರ್ನಮೆಂಟ್‌ಗಳಲ್ಲಿ ಇವರ ದೊಡ್ಡ ಸಾಧನೆಯಾಗಿತ್ತು. 29ರ ಹರೆಯದ ವೀನುಸ್ ಅವರು 1974ರ ಬಳಿಕ ನ್ಯೂಝಿಲೆಂಡ್ ಪರ ಗ್ರಾನ್ ಸ್ಲಾಮ್ ಜಯಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಒನಿ ಪಾರುನ್ ಈ ಮೊದಲು ಫ್ರೆಂಚ್ ಒಪನ್ ಜಯಿಸಿದ ನ್ಯೂಝಿಲೆಂಡ್‌ನ ಆಟಗಾರ.
Next Story





