ಇಂಗ್ಲೆಂಡನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಹ್ಯಾರಿ ಕೇನ್
ವಿಶ್ವಕಪ್ ಅರ್ಹತಾ ಪಂದ್ಯ

ಗ್ಲಾಸ್ಗೋ, ಜೂ.11: ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವಿನ ಫಿಫಾ ವಿಶ್ವಕಪ್‌ನ ಅರ್ಹತಾ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ.
ಇಂಗ್ಲೆಂಡ್ 2009ರಲ್ಲಿ ಅರ್ಹತಾ ಪಂದ್ಯದಲ್ಲಿ ಸೋಲು ಅನುಭವಿಸಿದಂತೆ ಸೋಲಿನ ದವಡೆಗೆ ಸಿಲುಕಿತು. ಆದರೆ ನಾಯಕ ಕೇನ್ ಗೋಲು ದಾಖಲಿಸಿ ತಂಡವನ್ನು ಸೋಲು ತಪ್ಪಿಸಿದರು.
1999ರ ಬಳಿಕ ಸ್ಕಾಟ್ಲೆಂಡ್‌ಗೆ ಮೊದಲ ಗೆಲುವು ನಿರಾಕರಿಸಿದರು. ಎಫ್ ಗುಂಪಿಲ್ಲಿ ಇಂಗ್ಲೆಂಡ್ ಗೆಲುವಿನ ಓಟ ಮುಂದುವರಿಸಿತು. ಮಂಗಳವಾರ ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಫ್ರಾನ್ಸ್‌ನ್ನು ಎದುರಿಸಲಿದೆ.
ಇಂಗ್ಲೆಂಡ್‌ನ ಅಲೆಕ್ಸ್ ಚೆಂಬೆರ್ಲಿಯನ್ 70ನೆ ನಿಮಿಷದಲ್ಲಿ ತಂಡದ ಗಳು ಖಾತೆ ತೆರೆದಿದ್ದರು. ಅಷ್ಟರ ತನಕ ಉಭಯ ತಂಡಗಳಿಂದಲೂ ಗೋಲು ದಾಖಲಾಗಲಿಲ್ಲ. ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು. ಆದರೆ 87ನೆ ನಿಮಿಷದಲ್ಲಿ ಸ್ಕಾಟ್ಲೆಂಡ್‌ನ ಲಿಗ್ ಗಿರಿಫ್ಟಿಟಸ್ 87ನೆ ನಿಮಿಷ ಮತ್ತು 90ನೆ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಲಾಟ್ಲೆಂಡ್‌ಗೆ 2-1 ಮುನ್ನಡೆ ದೊರಕಿಸಿಕೊಟ್ಟರು.
ಸ್ಕಾಟ್ಲೆಂಡ್ ಗೆಲುವು ದಾಖಲಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಹೆಚ್ಚುವರಿ ಸಮಯ(90+3) ದಲ್ಲಿ ನಾಯಕ ಕೇನ್ ಗಳು ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಇಂಗ್ಲೆಂಡ್ ಸಮಬಲ ಸಾಧಿಸಿತು.
ಇಂಗ್ಲೆಂಡ್ ವಿಶ್ವಕಪ್‌ನ ಎಫ್ ಗುಂಪಿನ ಅರ್ಹತಾ ಪಂದ್ಯಗಳಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸಿದೆ. 2ರಲ್ಲಿ ಡ್ರಾ ಸಾಧಿಸಿ 14 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.







