ಸೆಮಿಫೈನಲ್‌ಗೇರಲು ಪಾಕ್-ಲಂಕಾ ಹಣಾಹಣಿ

ಕಾರ್ಡಿಫ್, ಜೂ.11: ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಸೋಮವಾರ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್‌ನಲ್ಲಿ ಅವಕಾಶ ಧೃಢಪಡಿಸಲಿದೆ.
ಉಭಯ ತಂಡಗಳಿಗೂ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಕೂಟದಿಂದ ಹೊರಬೀಳಲಿದೆ.
ಪಾಕಿಸ್ತಾನ ಹಾಲಿ ಚಾಂಪಿಯನ್ ಭಾರತದ ವಿರುದ್ಧ 124 ರನ್‌ಗಳ ಸೋಲು ಅನುಭವಿಸಿತ್ತು. ಆದರೆ ದಕ್ಷಿಣ ಆಫ್ರಿಕ ವಿರುದ್ಧ ಗೆಲುವು ದಾಖಲಿಸಿ ನಿರ್ಣಾಯಕ ಹಂತಕ್ಕೆ ತಲುಪಿದೆ.
ಶ್ರೀಲಂಕಾ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 96 ರನ್‌ಗಳ ಸೋಲು ಅನುಭವಿಸಿತ್ತು. ಆದರೆ ಎರಡನೆ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿ ಸೆಮಿಫೈನಲ್‌ಗೇರುವ ಅವಕಾಶವನ್ನು ಜೀವಂತವಾಗಿರಿಸಿತ್ತು.
ಊಭಯ ತಂಡಗಳಿಗೂ ಈ ಪಂದ್ಯ ಕ್ವಾರ್ಟರ್ ಫೈನಲ್‌ನಂತಿದೆ. ಪಾಕಿಸ್ತಾನವು ಮಳೆ ಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿ ವಿರುದ್ಧ ಡಿಎಲ್ ನಿಯಮದಂತೆ 19 ರನ್‌ಗಳ ಜಯ ಗಳಿಸಿತ್ತು.
ಪಾಕಿಸ್ತಾನ ಬೌಲರ್‌ಗಳು ಭಾರತದ ವಿರುದ್ಧದ ಪಂದ್ಯದಲ್ಲಿ ಕೈ ಸುಟ್ಟುಕೊಂಡಿದ್ದರು. ಆದರೆ ದಕ್ಷೀನ ಆಫ್ರಿಕ ವಿರುದ್ಧ ಬೌಲರ್‌ಗಳು ತಮ್ಮ ವೈಫಲ್ಯವನ್ನು ಸರಿಪಡಿಸಿಕೊಂಡಿದ್ದರು. ಎಬಿ ಡಿವಿಲಿಯರ್ಸ್ ಮತ್ತು ಹಾಶಿಮ್ ಅಮ್ಲ ಪಾಕ್ ಬೌಲರ್‌ಗಳ ಮುಂದೆ ಕೈಸುಟ್ಟುಕೊಂಡಿದ್ದರು. ಡಿವಿಲಿಯರ್ಸ್ ಸೊನ್ನೆ ಸುತ್ತಿದ್ದರು.
ಎಡಗೈ ಸ್ಪಿನ್ನರ್ ಇಮಾದ್ ವಸೀಮ್20ಕ್ಕೆ 2, ಹಸನ್ ಅಲಿ 24ಕ್ಕೆ 3 ವಿಕೆಟ್ ಪಡೆದು ದಕ್ಷಿಣ ಆಫ್ರಿಕವನ್ನು 8 ವಿಕೆಟ್‌ಗಳಲ್ಲಿ 219 ರನ್‌ಗಳಿಗೆ ನಿಯಂತ್ರಿಸಿದ್ದರು.
ಆಪಕಿಸ್ತಾನದ ಬಾಬರ್ ಅಝಮ್(ಔಟಾಗದೆ 31) ಮತ್ತು ಶುಐಬ್ ಮಲಿಕ್(ಔಟಾಗದೆ 16) ತಂಡಕ್ಕೆ ಅಗತ್ಯದ ರನ್ ಧಾರಣೆಯನ್ನು ಕಾಯ್ದುಕೊಳ್ಳುವಲ್ಲಿ ನೆರವಾಗಿದ್ದರು. ಇದರಿಂದ ಮಳೆಯಿಂದಾಗಿ ಪಾಕಿಸ್ತಾನದ ಬ್ಯಾಟಿಂಗ್ ನಿಲ್ಲುವ ಹೊತ್ತಿಗೆ 27 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 119ರನ್ ಗಳಿಸಿತ್ತು.
ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ದಕ್ಷಿಣ ಆಫ್ರಿಕ ವಿರುದ್ಧ ಉತ್ತಮ ದಾಳಿಯ ನೆರವಿನಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿದೆ. ಮುಂದಿನ ಪಂದ್ಯಲ್ಲೂ ಒಳ್ಳೆಯ ಪ್ರದರ್ಶನ ನೀಡಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಲಿದೆ ಎಂವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಆಫ್ರಿಕ ವಿರುದ್ಧ ಸೋಲು ಅನುಭವಿಸತ್ತು. ಅವರು ತಂಡಕ್ಕೆ ವಾಪಸಾಗಿ ತನ್ನ ಅಪೂರ್ವ ಫಾರ್ಮ್ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಲಂಕಾ ತಂಡವು ಹಾಲಿ ಚಾಂಪಿಯನ್ ಭಾರತದ ವಿರುದ್ಧ ಅಪೂರ್ವ ಗೆಲುವು ದಾಖಲಿಸಿತ್ತು.322ರನ್‌ಗಳ ಗೆಲುವಿನ ಸವಾಲನ್ನು ಪಡೆದ ಶ್ರೀಲಂಕಾ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತ್ತು.ಕುಶಲ್ ಮೆಂಡಿಸ್(89), ಧನುಷ್ಕ ಗುಣತಿಲಕ(76) ಮತ್ತು ಮ್ಯಾಥ್ಯೂಸ್(52) ಅರ್ಧಶತಕಗಳ ಕೊಡುಗೆ ನೀಡಿದ್ದರು.
ಉಭಯ ತಂಡಗಳು ಮುಂದಿನ ಪಂದ್ಯದಲ್ಲಿ ಗೆಲುವಿಗೆ ಕಠಿಣ ಹೋರಾಟ ನಡೆಸಲಿದೆ.
ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಕಾರಣದಿಂದಾಗಿ ಪಾಕಿಸ್ತಾನ ಗೆಲ್ಲುವ ಕನಸು ಕಾಣುತ್ತಿದೆ.
ಹೆಡ್‌ಟು ಹೆಡ್
ಆಡಿರುವ ಪಂದ್ಯಗಳು 147
ಗೆಲುವು : ಪಾಕಿಸ್ತಾನ 84, ಶ್ರೀಲಂಕಾ 58
ಟೈ: 1, ಫಲಿತಾಂಶರಹಿತ 4
ಪಾಕಿಸ್ತಾನ: ಸರ್ಫರಾಜ್ ಅಹ್ಮದ್(ನಾಯಕ), ಅಹ್ಮದ್ ಶಹಝಾದ್, ಅಝರ್ ಅಲಿ, ಬಾಬರ್ ಅಝಮ್, ಫಯೀಮ್ ಅಶ್ರಫ್, ಫಾಕರ್ ಝಮಾನ್, ಹಾರಿಸ್ ಸೊಯೈಲ್, ಹಸನ್ ಅಲಿ, ಇಮಾದ್ ವಸೀಂ, ಜುನೈದ್ ಖಾನ್, ಮುಹಮ್ಮದ್ ಆಮಿರ್, ಮುಹಮ್ಮದ್ ಹಪೀಝ್, ಶಹದಾಬ್ ಖಾನ್ ಮುತ್ತು ಶುಐಬ್ ಮಲಿಕ್.
ಶ್ರೀಲಂಕಾ:ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ಉಪುಲ್ ತರಂಗ, ದಿನೇಶ್ ಚಾಂಡಿಮಾಲ್, ನಿರೊಶನ್ ಡಿಕೆವಾಲಾ,ಚಾಮರಾ ಕಪುಗಡೆರಾ, ಕುಶಲ್ ಮೆಂಡಿಸ್, ಕುಶಲ್ ಪೆರೆರಾ, ತಿಸ್ಸರಾ ಪೆರೆರಾ, ಸೆಕುಗೆ ಪ್ರಸನ್ನ, ನುವಾನ್ ಪ್ರದೀಪ್, ಸುರಂಗ ಲಕ್ಮಲ್, ಲಕ್ಶನ್ ಸಂಡಕನ್, ಲಸಿತ್ ಮಾಲಿಂಗ, ಅಸೆಲಾ ಗುಣರತ್ನೆ, ನುವಾನ್ ಕುಲಶೇಖರ.
ಪಂದ್ಯದ ಸಮಯ: ಮಧ್ಯಾಹ್ನ 3:00







