ಕಸಬಾ ಬೆಂಗ್ರೆ: ಸ್ತ್ರೀ ರೋಗ ತಪಾಸಣಾ ಶಿಬಿರ

ಮಂಗಳೂರು, ಜೂ.12: ನಮ್ಮ ಬೆಂಗ್ರೆ ಎಸ್.ಎಂ.ಒ. ಹಾಗೂ ಮಹಿಳಾ ಸಮಾಜ ಬೆಂಗ್ರೆ ಇದರ ಆಶ್ರಯದಲ್ಲಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗ ಇದರ ಸಹಯೋಗದೊಂದಿಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಕವಿತಾ ಐವನ್ ಡಿಸೋಜ ಹಾಗೂ ತಜ್ಞ ವೈದ್ಯರಿಂದ ಸ್ತ್ರೀ ರೋಗ ತಪಸಣಾ ಶಿಬಿರವು ತೋಟ ಬೆಂಗ್ರೆಯ ಮಹಿಳಾ ಸಮಾಜದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ. ಕವಿತಾ ಐವನ್ ಡಿಸೋಜ ಈ ಶಿಬಿರದ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಕಾರ್ಪೋರೇಟರ್ ಮೀರಾ ಕರ್ಕೇರಾ, ಪರ್ಶಿಯನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಬೆಂಗ್ರೆ, ಮಹಿಳಾ ಸಮಾಜ ಬೆಂಗ್ರೆ ಇದರ ಅಧ್ಯಕ್ಷೆ ಸರಿತಾ ಪುತ್ರನ್, ಎ.ಜೆ. ಅಸ್ಪತ್ರೆ ಮಹಾವಿದ್ಯಾಲಯದ ಡಾ. ವೀಣಾ ಭಗವಾನ್ ಉಪಸ್ಥಿತರಿದ್ದರು.
ಮಹಾಜನ ಸಭಾ ಬೆಂಗ್ರೆ ಇದರ ಅಧ್ಯಕ್ಷ ಚೇತನ್ ಕುಮಾರ್ ಸ್ವಾಗತಿಸಿದರು.
Next Story





