ಜೂ.17: ನಾರಾಯಣ ಗುರು ಅರಿವು ಕಾರ್ಯಕ್ರಮ
ಮಂಗಳೂರು, ಜೂ.12: ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠ ಮತ್ತು ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರವು ಜೂ.17ರಂದು ಸಂಜೆ 4 ಗಂಟೆಗೆ ಬಲ್ಮಠದ ಸಹೋದಯ ಹಾಲ್‌ನಲ್ಲಿ ‘ಗುರುನ ಅರಿವು ಕಜ್ಜ’ವನ್ನು ಹಮ್ಮಿಕೊಂಡಿವೆ.
ಪೇರೂರು ಜಾರು ಅವರ ‘ಗುರುಕುಲೆ ಗುರು ನಾರಾಯಣ’ ಪುಸ್ತಕದ ಮೇಲೆ ಮಂಥನ ನಡೆಯಲಿದೆ. ಮಲಾರು ಜಯರಾಮ ರೈ ವಿಷಯ ಮಂಡಿಸುವರು. ಸಿ.ಎಲ್. ಪುರ್ತಾಡೊ, ಪ್ರಭಾಕರ ನೀರುಮಾರ್ಗ, ಎನ್. ಪಿ. ಶೆಟ್ಟಿ, ರವಿಶಂಕರ್ ಮಿಜಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





