ಚಾಂಪಿಯನ್ಸ್ ಟ್ರೋಫಿ: ಶ್ರೀಲಂಕಾವನ್ನು 236ಕ್ಕೆ ನಿಯಂತ್ರಿಸಿದ ಪಾಕ್

ಕಾರ್ಡಿಫ್, ಜೂ.12: ಜುನೈದ್ ಖಾನ್, ಹಸನ್ ಅಲಿ ಹಾಗೂ ಮುಹಮ್ಮದ್ ಆಮಿರ್ ಅವರ ಸಂಘಟಿತ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ತನ್ನ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 49.2 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್ ಮಾಡಿದೆ.
ಟಾಸ್ ಜಯಿಸಿದ ಪಾಕ್ ತಂಡ ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿತು.
ಲಂಕೆಯ ಆರಂಭಿಕ ಆಟಗಾರ ಡಿಕ್‌ವೆಲ್ಲಾ(73 ರನ್, 86 ಎಸೆತ, 4 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(39), ಮೆಂಡಿಸ್(27), ಗುಣರತ್ನೆ (27)ಹಾಗೂ ಲಕ್ಮಲ್(26) ಎರಡಂಕೆ ಸ್ಕೋರ್ ದಾಖಲಿಸಿದರು.
ಜುನೈದ್ ಖಾನ್(3-40), ಹಸನ್ ಅಲಿ(3-43) ತಲಾ ಮೂರು ವಿಕೆಟ್,ಮುಹಮ್ಮದ್ ಆಮಿರ್(2-51) ಹಾಗೂ ಫಹೀಮ್ ಅಶ್ರಫ್(2-37) ತಲಾ ಎರಡು ವಿಕೆಟ್ ಕಬಳಿಸಿದರು.
ಸೆಮಿ ಫೈನಲ್‌ಗೆ ತಲುಪಲು ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮುಖ್ಯವಾಗಿದೆ.
Next Story





