ರಾಹುಲ್ ಆಗಮನಕ್ಕೆ ಅರ್ಧ ದಿನದ ಕಲಾಪ ಆಹುತಿ

ಬೆಂಗಳೂರು, ಜೂ. 12: ವಿಧಾನ ಮಂಡಲ ಅಧಿವೇಶನ ಕಲಾಪ ವಿಪಕ್ಷ ಸದಸ್ಯರ ವಾಗ್ಯುದ್ಧ, ಗದ್ದಲ, ಧರಣಿ ಸತ್ಯಾಗ್ರಹಕ್ಕೆ ಬಲಿಯಾಗುತ್ತಿದ್ದುದು ಸಹಜ. ಆದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ವಿಧಾನ ಮಂಡಲ ಉಭಯ ಸದನ ಕಲಾಪ ಅರ್ಧ ದಿನಕ್ಕೆ ಮೊಟಕುಗೊಳಿಸಲಾಗಿದೆ.
ಸೋಮವಾರ ವಿಧಾನಸಭೆ-ವಿಧಾನ ಪರಿಷತ್ ಕಲಾಪ ನಿಗದಿತ ವೇಳೆಗೆ ಆರಂಭವಾದವು. ಉಭಯ ಸದನಗಳ ಕಲಾಪದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಕ್ತಾಯದ ಬಳಿಕ ನಾಳೆ ಬೆಳಗ್ಗೆ ಸೇರುವಂತೆ ಕಲಾಪ ಮುಂದೂಡಲಾಯಿತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ‘ಕೈ’ ಶಾಸಕರು ಪಾಲ್ಗೊಳ್ಳುವ ಕಾರಣಕ್ಕೆ ಕಲಾಪ ಮುಂದೂಡಲಾಗಿದೆ.
ಮಧ್ಯಾಹ್ನ 12:45ರ ಸುಮಾರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಸಚಿವರು-ಶಾಸಕರು ಪಾಲ್ಗೊಳ್ಳುವ ನಿಮಿತ್ತ ಅಧಿವೇಶನ ಕಲಾಪ ಮೊಟಕುಗೊಳಿಸಲಾಗಿದೆ.
Next Story





