ರಾಜ್ಯ ಪವರ್‌ಲಿಫ್ಟಿಂಗ್ : ಆಳ್ವಾಸ್‌ಗೆ ಸಮಗ್ರ ತಂಡ ಪ್ರಶಸ್ತಿ
.jpg)
ಮೂಡುಬಿದಿರೆ, ಜೂ.12: ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಜೂನ್ 10, 11ರಂದು ಜರುಗಿದ ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ಮಹಿಳಾ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಆಳ್ವಾಸ್ ಮಹಿಳಾ ವಿಭಾಗದಲ್ಲಿ ಭವಿಷ್ಯ ಪೂಜಾರಿ ಮೂರು ರಾಜ್ಯ ದಾಖಲೆ ಮಾಡಿದರೆ, ಮರಿನಾ ದೇವಿ ಮೂರು ಹೊಸ ದಾಖಲೆ ಮಾಡಿ ಕೂಟದ ಬಲಿಷ್ಠ ಮಹಿಳೆಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
Next Story





