ದ್ವಿಚಕ್ರ ವಾಹನ ಢಿಕ್ಕಿ: ಪಾದಚಾರಿಗೆ ಗಾಯ
ಮಂಗಳೂರು, ಜೂ. 12: ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯ ಗೊಂಡಿರುವ ಘಟನೆ ಕಾವೂರು ಪೆಟ್ರೋಲ್ ಪಂಪ್ ಎದುರು ನಡೆದಿದೆ.
ಗಾಯಾಳುವನ್ನು ಬೆಂಗಳೂರಿನ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಇವರು ಸ್ನೇಹಿತ ಬೊಂದೇಲ್ ನಿವಾಸಿ ದತ್ರಾತ್ತೇಯ ಅವರ ಮನೆಯಿಂದ ತನ್ನ ಪತ್ನಿಯೊಂದಿಗೆ ಕಾವೂರಿನಿಂದ ನಡೆದುಕೊಂಡು ಬರುತ್ತಿದ್ದರು. ಕಾವೂರು ಎಚ್.ಪಿ.ಪೆಟ್ರೋಲ್ ಪಂಪ್‌ನ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಹೇಶ್ ಅವರು ರಸ್ತೆಗೆ ಉರುಳಿ ಬಿದ್ದು, ಬಲಗಾಲಿನ ಹಿಮ್ಮಡಿಯ ಮೇಲ್ಭಾಗಕ್ಕೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾಹನ ಸವಾರ ಅರುಣ್ ಕುಮಾರ್ ಅವರ ನಿರ್ಲಕ್ಷದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸಂಚಾರ ಉತ್ತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





