ಜಗತ್ತಿನ ಮೂರನೆ ಒಂದಂಶ ಜನರಿಗೆ ಬೊಜ್ಜಿನ ಸಮಸ್ಯೆ

ವಾಶಿಂಗ್ಟನ್,ಜೂ.12: ಜಗತ್ತಿನ ಜನಸಂಖ್ಯೆಯ ಮೂರನೆ ಒಂದರಷ್ಟು ಮಂದಿ ಬೊಜ್ಜು ಅಥವಾ ಅತಿಯಾದ ದೇಹತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದು, ಇವುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವುದಾಗಿ ಅಧ್ಯಯನ ವರದಿಯೊಂದು ಆತಂಕ ವ್ಯಕ್ತಪಡಿಸಿದೆ..
2015ರಲ್ಲಿ ಸುಮಾರು 40 ಲಕ್ಷ ಮಂದಿ ಹೃದ್ರೋಗ, ಮಧುಮೇಹ,ಕ್ಯಾನ್ಸರ್ ಮತ್ತಿತರ ಬೊಜ್ಜಿಗೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಮೃತಪಟ್ಟಿದ್ದಾರೆ. 1990ರಲ್ಲಿ ಬೊಜ್ಜಿನ ಸಮಸ್ಯೆಯಿಂದ ಸಾವನ್ನಪ್ಪಿದವರ ಸಂಖ್ಯೆಗಿಂತ ಇದು ಶೇ.28ರಷ್ಟು ಅಧಿಕವೆಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಬಹಿರಂಗಪಡಿಸಿದೆ.
2015ರಲ್ಲಿ ಜಗತ್ತಿನಾದ್ಯಂತ 220 ಕೋಟಿ ಜನರು ಬೊಜ್ಜಿನ ಸಮಸ್ಯೆಗೆ ತುತ್ತಾಗಿದ್ದು, ಇದು ಜಗತ್ತಿನ ಜನಸಂಖ್ಯೆಯ ಶೇ.30ರಷ್ಟಾಗಿದೆ ಎಂದು ವರದಿ ಹೇಳಿದೆ.
Next Story





