ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ
ಸರ್ಫರಾಝ್ ಬ್ಯಾಟಿಂಗ್ ಗೆ ಮಣಿದ ಲಂಕೆ

ಲಂಡನ್, ಜೂ.12: ನಾಯಕ ಸರ್ಫರಾಝ್ ಅಹ್ಮದ್ ಮತ್ತು ಮುಹಮ್ಮದ್ ಆಮಿರ್ ಬ್ಯಾಟಿಂಗ್ ನೆರವಿನಲ್ಲಿ ಪಾಕಿಸ್ತಾನ ಇಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 3 ವಿಕೆಟ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.
ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 237 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ಇನ್ನೂ 31ಎಸೆತಗಳು ಬಾಕಿ ಇರುವಾಗಲೇ 7ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿ ಗೆಲುವಿನ ದಡ ಸೇರಿತು.
ನಾಯಕ ಸರ್ಫರಾಝ್ ಔಟಾಗದೆ 61 ರನ್ (79ಎ, 5ಬೌ) ಮತ್ತು ಆಮಿರ್ ಔಟಾಗದೆ 28ರನ್(43ಎ,1ಬೌ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರು 8ನೆ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.
ಪಾಕಿಸ್ತಾನದ ಫಕಾರ್ ಝಮಾನ್ 50ರನ್, ಅಝರ್ ಅಲಿ 34 ರನ್ , ಬಾಬರ್ ಅಝಮ್ 10ರನ್, ಮಲಿಕ್ 11ರನ್, ಇಮಾದ್ ವಸೀಮ್ 4ರನ್, ಫಯೀಮ್ ಅಶ್ರಫ್ 15ರನ್, ಹಫೀಝ್ 1ರನ್ ಗಳಿಸಿದರು.
Next Story





