ಯೆನೆಪೋಯ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ವಿವಿಧ ಕಾರ್ಯಕ್ರಮ

ಕೊಣಾಜೆ, ಜೂ. 12: ವಿಶ್ವ ಪರಿಸರ ದಿನದ ಅಂಗವಾಗಿ ಯೆನೆಪೋಯ ವಿಶ್ವವಿದ್ಯಾನಿಲಯ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಿತು.
'ಪರಿಸರ ದಿನದ ಘೋಷಣೆಯಾದ ನಿಸರ್ಗದೊಂದಿಗೆ ಜನ ಜೋಡಣೆ' ಈ ವಿಷಯದ ಮೇಲೆ ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕರು ಡಾ. ಭಾಗ್ಯ ಬಿ. ಅವರು ಮಂಗಳೂರು ಆಕಾಶವಾ ಣಿಯ ವನಿತಾ ವಾಣಿಯಲ್ಲಿ ನೇರ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪರಿಸರವನ್ನು ರಕ್ಷಿಸಲು ಎದುರಾಗುವ ಸವಾಲುಗಳು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವ, ಪರಿಸರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ, ಸ್ಥಳೀಯ ಆಹಾರ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಈ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಿದರು.
ಜೂ. 6 ರಂದು ವಿದ್ಯಾರ್ಥಿಗಳಿಂದ ವಿಶ್ವವಿದ್ಯಾನಿಲಯದ ಆವರಣ ಸ್ವಚ್ಚತಾ ಅಭಿಯಾನ ಹಾಗೂ ಗಿಡನೆಡುವ ಕಾರ್ಯಕ್ರಮವು ರಾಷ್ಟ್ರಿಯ ಸೇವಾ ಯೋಜನಾ ಘಟಕದೊಂದಿಗೆ ಜಂಟಿಯಾಗಿ ನಡೆಸಲಾಯಿತು.
ಜೂ.10 ರಂದು ನಿಸರ್ಗದೊಂದಿಗೆ ಜನ ಜೋಡಣೆ ಈ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯದಿಂದಾಗಿ, ಎರಡು ತಾಳೆ ಮರಗಳನ್ನು ಬೇರು ಸಹಿತ ಕಿತ್ತು ಇನ್ನೊಂದೆಡೆ ಸ್ಥಳಾಂತರಿಸಿ ನೆಡಲಾಯಿತು. ತೋಟಗಾರಿಕೆ ಇಲಾಖೆಯ ವಸಂತ್ ಇವರು ಇದನ್ನು ಸಮರ್ಪಕವಾಗಿ ನೆರವೇರಿಸಿದರು.







