ಮುಡಿಪು: ಮನೆಗೆ ನುಗ್ಗಿ ಕಳವು
ಕೊಣಾಜೆ, ಜೂ. 12: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಸಮೀಪದ ಮಿತ್ತಕೋಡಿ ಅಂಗಣೆಮಾರು ಎಂಬಲ್ಲಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗ, ನಗದು ದೋಚಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಅಂಗಣೆಮಾರು ನಿವಾಸಿ ಮಾರ್ಷೆಲ್ ಡಿಸೋಜಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು ಹದಿಮೂರುವರೆ ಪವನ್ ಚಿನ್ನ, 60 ಸಾವಿರ ರೂ.ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಮಾರ್ಷೆಲ್ ಅವರು ಪತ್ನಿಯೊಂದಿಗೆ ಮಧ್ಯಾಹ್ನ ವೈದ್ಯರ ಬಳಿ ತೆರಳಿದ್ದು ಅವರ ಪುತ್ರಿಯೂ ಈ ವೇಳೆ ಟ್ಯೂಷನ್ಗೆ ತೆರಳಿದ್ದಳೆನ್ನಲಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
Next Story





