ವೇಲ್ಸ್-ಸರ್ಬಿಯ ಪಂದ್ಯ ಡ್ರಾ

ಬೆಲ್‌ಗ್ರೆಡ್, ಜೂ.12: ‘ಡಿ’ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ 1-1 ರಿಂದ ಡ್ರಾ ಸಾಧಿಸಿರುವ ವೇಲ್ಸ್ ಹಾಗೂ ಸರ್ಬಿಯ ತಂಡ ಮುಂದಿನ ವರ್ಷ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿವೆ.
ಮೊದಲಾರ್ಧದಲ್ಲಿ ಆ್ಯರೊನ್ ರಾಮ್ಸೆ ಬಾರಿಸಿದ ಗೋಲಿನ ನೆರವಿನಿಂದ ವೇಲ್ಸ್ ತಂಡ 1-0 ಮುನ್ನಡೆ ಸಾಧಿಸಿತು. ಸರ್ಬಿಯ ಸ್ಟ್ರೈಕರ್ ಅಲೆಕ್ಸಾಂಡರ್ ಮಿಟ್ರೊವಿಕ್ ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿದರು.
ಈ ಫಲಿತಾಂಶದಿಂದಾಗಿ ಸರ್ಬಿಯ ತಂಡ ಆರು ಪಂದ್ಯಗಳಲ್ಲಿ 12 ಅಂಕಗಳನ್ನು ಗಳಿಸಿ ಅಗ್ರ ಸ್ಥಾನ ತಲುಪಿದ್ದು, ಗೋಲು ವ್ಯತ್ಯಾಸದಲ್ಲಿ ಐರ್ಲೆಂಡ್‌ಗಿಂತ ಮುಂದಿದೆ. ತಲಾ 8 ಅಂಕಗಳನ್ನು ಗಳಿಸಿರುವ ವೇಲ್ಸ್ ಹಾಗೂ ಆಸ್ಟ್ರೀಯ ಕ್ರಮವಾಗಿ 3ನೆ ಹಾಗೂ 4ನೆ ಸ್ಥಾನದಲ್ಲಿವೆ.
ಯುರೋ 2016ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಇಂಗ್ಲೆಂಡ್ ಸತತ ಎರಡನೆ ಬಾರಿ ಪ್ರಮುಖ ಟೂರ್ನಿಗೆ ಅರ್ಹತೆ ಗಳಿಸಬೇಕಾದರೆ ಉಳಿದ ಎಲ್ಲ 4 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಸರ್ಬಿಯ ವಿರುದ್ಧ ಫಲಿತಾಂಶ ಸಂತೋಷ ತಂದಿದೆ ಎಂದು ವೇಲ್ಸ್ ತಂಡದ ಕೋಚ್ ಕ್ರಿಸ್ ಕಾಲ್ಮನ್ ಹೇಳಿದ್ದಾರೆ.





