ನಾಪತ್ತೆಯಾದ ಅಪ್ರಾಪ್ತ ಬಾಲಕಿಯರು ಏರ್ವಾಡಿಯಲ್ಲಿ: ಜೊತೆಯಲ್ಲಿದ್ದ ಯುವಕರ ಸೆರೆ

ವೈಪ್ಪಿನ್(ಕೇರಳ), ಜೂ. 13: ವೈಪ್ಪಿನಿ ಎಂಬಲ್ಲಿಂದ ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿಯರು ತಮಿಳ್ನಾಡಿನ ಏರ್ವಾಡಿಯಲ್ಲಿ ಪತ್ತೆಯಾಗಿದ್ದಾರೆ.ಇವರ ಜೊತೆಗಿದ್ದ ಕಾಸರಗೋಡು, ಕಣ್ಣೂರಿನ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿಯ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾಸರಗೋಡಿನ ಚೆರುವತ್ತೂರ್ ಕಂಡತ್ತಿಲ್ ಸುಹೈಲ್(19) ಮತ್ತುಕಣ್ಣೂರ್ ಪೆರಾವೂರ್ ತೊಂಡಿಯಿಲ್ ಎಂಬಲ್ಲಿನ ಬಿಬಿನ್ ಲಾಲ್(20)ರನ್ನು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ವಶೀಕರಿಸಿ ಇವರು ಕರೆದುಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಗೆ ಞಾರಕ್ಕಲ್ ಕೋರ್ಟು ರಿಮಾಂಡ್ ವಿಧಿಸಿದೆ. ಬಾಲಕಿಯರನ್ನು ಮನೆಯವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story





