ಮೂಢಾಚರಣೆ ಪ್ರತಿಬಂಧಕ ವಿಧೇಯಕ ಜಾರಿ ತುರ್ತು ಅಗತ್ಯ: ನಾ. ಮಂಜುನಾಥ್
.jpg)
ಹಾಸನ,ಜೂ.13: ಮೂಢಾಚರಣೆ ಪ್ರತಿಬಂಧಕ ವಿಧೇಯಕ ಜಾರಿ ಮಾಡುವುದು ತುರ್ತು ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಕೇಂದ್ರ ಗ್ರಂಥಾಲಯದ ಹಿಂಬಾಗ ಇರುವ ಮಹಾಂತಪ್ಪ ಅವರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವೈಜ್ಞಾನಿಕ ಮನೋವೃತ್ತಿ ಸಂಚಾಲಕರ ಸಬಲೀಕರಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರನ್ನು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಸಮರ್ಥವಾಗಿ ಪೂರೈಸಿತು.
ಕಳೆದ ಎರಡು ದಿನಗಳ ವೈಜ್ಞಾನಿಕ ಮನೋವೃತ್ತಿ ಸಂಚಾಲಕರು ಸಬಲೀಕರಣ ಕಾರ್ಯಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಿಬಿರದಲ್ಲಿ ನಡೆದ ಸಂವಾಧದ ಫಲವಾಗಿ ಕರ್ನಾಟಕ ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕವನ್ನು ಸರಕಾರ ತರಲೇಬೇಕು ಎಂದು ಒತ್ತಾಯಿಸಿರುವುದು ಸ್ವಾಗತರ್ಹವಾಗಿದೆ. ವೈಜ್ಞಾನಿಕ ಮನೋವೃತ್ತಿ ಆಂದೋಲನವನ್ನು ಇನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಒಂದು ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
Next Story





