ಕಾರು ಅಪಘಾತ: ಯುವಕ ಮೃತ್ಯು
.jpg)
ಕಾಸರಗೋಡು, ಜೂ.13: ನಿಯಂತ್ರಣ ತಪ್ಪಿದ ಕಾರು ಅಂಗಡಿಯೊಳಗೆ ನುಗ್ಗಿದ ಪರಿಣಾಮ ಗಂಭೀರ ಗಾಯಗೊಂಡ ಚಾಲಕ ಮೃತಪಟ್ಟ ಘಟನೆ ಮಂಗಳವಾರ ನಗರ ಹೊರವಲಯದ ಅಣಂಗೂರಿ ನಲ್ಲಿ ನಡೆದಿದೆ.
ಮೃತರನ್ನು ಉಳಿಯತ್ತಡ್ಕ ಪುಳ್ಕೂರಿನ ಅಬ್ದುಲ್ ಬಾಸಿತ್ ( 22) ಎಂದು ಗುರುತಿಸಲಾಗಿದೆ.
ಕಾಸರಗೋಡು ನಗರದ ವಸ್ತ್ರದಂಗಡಿಯೊಂದರ ಮೆನೇಜರ್ ಆಗಿದ್ದ ಇವರು ಕಾಸರಗೋಡಿನಿಂದ ಮನೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಅಣಂಗೂರು ಬಳಿ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದ್ದು, ನಜ್ಜುಗುಜ್ಜಾದ ಕಾರಿನೊಳಗೆ ಸಿಲುಕಿದ್ದ ಬಾಸಿತ್ ರನ್ನು ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ಅವರು ತಿಳಿಸಿದರು.
ಬಾಸಿತ್ ಕೆಲ ವರ್ಷಗಳ ಕಾಲ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದರು. ಕೆಲ ಸಮಯದಿಂದ ಕಾಸರಗೋಡು ವಸ್ತ್ರದಂಗಡಿಯಲ್ಲಿ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಈ ಬಗ್ಗೆ ಕಾಸರಗೋಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story