ಗೋಳಿಯಡ್ಕ ಶಿಲುಬೆ ಗೋಪುರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ

ಕಡಬ, ಜೂ.13. ನೂಜಿ ಬಾಳ್ತಿಲ ಬೆಥನಿ ಸೈಂಟ್ ಮೇರಿಸ್ ಪ್ರೋ ಕತೀಡ್ರಲ್ ಚರ್ಚ್ ವತಿಯಿಂದ ಗೋಳಿಯಡ್ಕ ಸಂತ ಅಂತೋನಿಯವರ ಶಿಲುಬೆ ಗೋಪುರದಲ್ಲಿ ಜೂ.3 ರಿಂದ 11 ರವರೆಗೆ ನವ ದಿನಗಳಲ್ಲಿ ಪವಾಡ ಪುರುಷ ಅಂತೋನಿಯವರ ವಾರ್ಷಿಕ ಹಬ್ಬ ನಡೆಯಿತು.
ಪ್ರತಿ ದಿನಗಳಲ್ಲಿ ವಿವಿಧ ದೇವಾಲಯಗಳ ಧರ್ಮಗುರುಗಳಿಂದ ದಿವ್ಯ ಬಲಿಪೂಜೆ ಹಾಗೂ ನೊವೆನೋ ಕಾರ್ಯಕ್ರಮ ನಡೆಯಿತು. ಜೂ.11 ರಂದು ಪುತ್ತೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ವಂದನೀಯ ರೆಫಾ ಜಾರ್ಜ್ ಕಾಳಾಯಿಲ್ ಪ್ರಾರ್ಥನೆಯೊಂದಿಗೆ ಪವಿತ್ರ ಸಮೂಹ ದಿವ್ಯ ಬಲಿ ಪೂಜೆ ನೆರವೇರಿಸಿ ಪ್ರಭು ಏಸುಕ್ರಿಸ್ತನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಆಶೀರ್ವದಿಸಿದರು.
ಬೆಥನಿ ಪ್ರೋ ಕಥೀಡ್ರಲ್ ಚರ್ಚ್‌ನ ವಿಕಾರ್ ರೆಫಾ ವಿನ್ಸೆಂಟ್ ಜೋರ್ಜ್ ಸ್ವಾಗತಿಸಿ ಹಬ್ಬದ ಸಂದೇಶ ಸಾರಿದರು. ಕುಂತೂರು ಚರ್ಚ್‌ನ ಧರ್ಮಗುರುಗಳಾದ ಜಾನ್ ಕುನ್ನತ್ತೇಲ್ ಪ್ರಾರ್ಥಿಸಿದರು. ವಾರ್ಷಿಕ ಹಬ್ಬದಲ್ಲಿ ಕೋಡಿಂಬಾಳ ಚರ್ಚ್‌ನ ಧರ್ಮಗುರುಗಳಾದ ಮ್ಯಾಥ್ಯು ವಾಳಕ್ಕೆ ವಾಲ್ ನೇತೃತ್ವದಲ್ಲಿ ರಾಜು ಕಾಙರಪಳ್ಳಿ, ನಿಧೀರ್ಶ ಇಚ್ಲಂಪಾಡಿ ಕೋಯರ್ ಪದ್ಯವನ್ನು ಹಾಡಿದರು. ಬೆಥನಿ ಪ್ರೋ.ಕಥೀಡ್ರಲ್ ಚರ್ಚ್‌ನ ಟ್ರಸ್ಟಿ ರಾಹೇಲ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯದರ್ಶಿ ವರ್ಗೀಸ್ ಪಾಲವಿಳ ಸಹಕರಿಸಿದರು. ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯ ತೋಮಸ್ ಕೆ.ಜೆ ಚರ್ಚ್‌ನ ಆಡಳಿತ ಸಮಿತಿ ಸದಸ್ಯರಾದ ವಿಜಯ್ ಕಾಳಾಯಿಲ್, ಜೋಸ್ ಕಾಙರಪಳ್ಳಿ, ಉಷಾರಾಜು, ಸಲೋಮಿ ವರ್ಗೀಸ್, ಸೇರಿದಂತೆ ಮಾಜಿ ಟ್ರಸ್ಟಿಗಳು ಚರ್ಚ್‌ನ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಎಂ.ಪಿ ತೋಮಸ್, ಸಮೀತ್ ಮೊದಲಪುರರವರ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.







