ಜೂನ್ 16 : ಪೆಟ್ರೋಲ್ ಬಂಕ್ ಬಂದ್
.jpg)
ಶಿವಮೊಗ್ಗ, ಜೂ. 13: ದಿನಕ್ಕೊಂದು ತೈಲದರವನ್ನು ಕಂಪನಿಗಳು ನಿಗದಿಗೊಳಿಸುವುದನ್ನು ಪ್ರತಿಭಟಿಸಿ ಜೂ. 16 ರಂದು 24 ಗಂಟೆಗಳ ಪೆಟ್ರೋಲ್ ಬಂಕ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿ ದಿನ ದರ ಬದಲಿಸುವುದರಿಂದ ಮಾರುಕಟ್ಟೆಯಲ್ಲಿ ಶಿಸ್ತು ಇದರುವುದಿಲ್ಲ. ಪ್ರತಿ ಪೆಟ್ರೋಲ್‌ಬಂಕ್ ಆಧುನೀಕರಣಗೊಳ್ಳುತ್ತಿದ್ದು, ಇದು ಪೂರ್ತಿ ಮುಗಿದಮೇಲೆ ಈ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 110 ಪೆಟ್ರೋಲ್ ಬಂಕ್‌ಗಳಿದ್ದು, ಇವುಗಳಲ್ಲಿ ಇನ್ನು ಸಾಕಷ್ಟು ಬಂಕ್‌ಗಳು ಆಧುನೀಕರಣಗೊಳ್ಳಬೇಕಿದೆ ಎಂದ ಅವರು ಜೂನ್ 15ರ ರಾತ್ರಿ 12ರಿಂದ ಜೂನ್ 16ರ ರಾತ್ರಿ 12ರವರೆಗೆ ಬಂದ್ ನಡೆಯಲಿದೆ. ಈ ಸಂದರ್ಭದಲ್ಲಿ ಆಗುವ ತೊಂದರೆಯನ್ನು ಗ್ರಾಹಕರು ಸಹಿಸಿಕೊಳ್ಳಬೇಕೆಂದು ಮನವಿಮಾಡಿದರು.
ಈ ಬಂದ್‌ಗೆ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಮತ್ತು ಸಿಟಿಬಸ್ ಮಾಲಕರ ಸಂಘ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಪಿ. ರುದ್ರೇಶ್ ಈ ಸಂದರ್ಭದಲ್ಲಿ ತಿಳಿಸಿದರು.







