ಸ್ವಾಗತ ಸಮಿತಿಗೆ ಆಯ್ಕೆ
ಕುಂದಾಪುರ, ಜೂ.13: ಕುಂದಾಪುರದಲ್ಲಿ ಜು.2 ಮತ್ತು 3ರಂದು ಜರಗುವ ಕಟ್ಟಡ ಕಾರ್ಮಿಕರ 3ನೆ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಂಘದ ಸಂಸ್ಥಾಪಕ ಯು.ದಾಸಭಂಡಾರಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿಯಾಗಿ ಶೇಖರ ಬಂಗೇರ ಉಡುಪಿ ಅವರನ್ನು ಇಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಸಮ್ಮೇಳನ ನಡೆಸುವ ಜವಾಬ್ದಾರಿಯ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು.
Next Story





