ಸಹಾಯಕ ಹುದ್ದೆ ಖಾಲಿ; ಗುತ್ತಿಗೆ ಆಧಾರದಲ್ಲಿ ನೇಮಕ
ಉಡುಪಿ, ಜೂ.13: ಉಡುಪಿ ಜಿ.ಪಂ.ನಲ್ಲಿ ಗುತ್ತಿಗೆ ಆಧಾರದ 2 ತಾಂತ್ರಿಕ ಸಹಾಯಕರ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಯನ್ನು ಹೊರ ಮೂಲ ಸಂಸ್ಥೆಯ ಮುಖಾಂತರ ನೇಮಕಾತಿ ಮಾಡಲು ಜೂ.15ರಂದು ಬೆಳಗ್ಗೆ 10:30 ರಿಂದ 2 ಗಂಟೆಯೊಳಗೆ ನೇರ ಸಂದರ್ಶನವನ್ನು ಹೊರ ಸಂಪನ್ಮೂಲ ಸಂಸ್ಥೆ, ಮಣಿಪಾಲದ ಜಿಪಂ ಕಚೇರಿಯಲ್ಲಿ ಏರ್ಪಡಿಸಿದೆ.
ಬಿಇ (ಸಿವಿಲ್) ಪದವಿ ಪಡೆದಿರುವ, ಕಂಪ್ಯೂಟರ್ ಜ್ಞಾನ ಹೊಂದಿರುವ 45 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಹೊರ ಮೂಲ ಸಂಸ್ಥೆಯ ಕಚೇರಿ ದೂರವಾಣಿ ಸಂಖ್ಯೆ: 080-23601667/23602667ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





