ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದಂತೆ ಮನವಿ
ಬೆಂಗಳೂರು, ಜೂ.13: ಬೆಂಗಳೂರು ಜಿಲ್ಲೆ ದಕ್ಷಿಣ ವಲಯ-3ರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಅನಧಿಕೃತ ಶಾಲೆಗಳು: ರಿಲಯನ್ಸ್ ಪಬ್ಲಿಕ್ ಸ್ಕೂಲ್(ಆಸ್ಟೀನ್ ಟೌನ್), ಕ್ರಿಸ್ಟಲ್ ಸ್ಕೂಲ್(ಆಸ್ಟೀನ್ ಟೌನ್), ಎಂಇಎಸ್ ಆಂಗ್ಲ ಶಾಲೆ(ಜಯನಗರ 4ನೆ ಬ್ಲಾಕ್), ಸೆಂಟ್ ಜಾನ್ ಆರ್ಚ್ ಫೌಂಡೇಷನ್ ಶಾಲೆ(ಎಚ್‌ಎಸ್‌ಆರ್ ಲೇಔಟ್), ಬೆಂಗಳೂರು ಆಲ್ ನ್ಯೂ ಪಬ್ಲಿಕ್ ಶಾಲೆ(ಮಂಗಮನ ಪಾಳ್ಯ), ಆರ್.ಜೆಡ್ ಸ್ಕೂಲ್(ಬಂಡೆಪಾಳ್ಯ), ಗ್ರೀನ್ ಟೀ ಸ್ಕೂಲ್(ಬಂಡೇಪಾಳ್ಯ), ಬ್ಲೂಬೆಲ್ ಸ್ಕೂಲ್(ರೂಪೇನ ಅಗ್ರಹಾರ), ಮಾಸ್ಟರ್ ಕಿಟ್ಸ್ ಸ್ಕೂಲ್(ಮಂಗಮನ ಪಾಳ್ಯ), ಸೆಂಟ್‌ಸಾರಾಸ್ ಶಾಲೆ(ವಿನಾಯಕ ನಗರ), ಅಂಕಿತ ಶಾಲೆ(ಹುಳಿಮಾವು), ಮದರ್ ಥೆರೇಸಾ ಶಾಲೆ(ಎಲೇನಹಳ್ಳಿ), ವಿಸಿಟಂ ಇಂಟರ್ ನ್ಯಾಷನಲ್ ಸ್ಕೂಲ್(ಎಟಿಎಂ ಬಡಾವಣೆ), ವಿದ್ಯಾನಿಕೇತನ ಶಾಲೆ(ಜರಗನಹಳ್ಳಿ), ಆಕ್ಟಿವ್ ಪಬ್ಲಿಕ್ ಶಾಲೆ(ಹೊಮದೇವನಹಳ್ಳಿ).
Next Story





