ಹಸುಗಳ ಕಳವು: ದೂರು
ಮಂಗಳೂರು, ಜೂ. 13: ಕೊಟ್ಟಿಗೆಯಲ್ಲಿದ್ದ 11 ಜಾನುವಾರುಗಳ ಪೈಕಿ 5 ಹಸುಗಳನ್ನು ಕಳವು ಮಾಡಿರುವ ಘಟನೆ ಪಡ್ಯಾರ್ ಎಂಬವಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ತೆಂಕ ಎಡಪದವು ಗ್ರಾಮದ, ಪಡ್ಯಾರು ಮನೆ ಎಂಬಲ್ಲಿರುವ ಫಿರ್ಯಾದಿ ಗೋವಿಂದ ಗೌಡ ಅವರ ಮನೆಯ ಪಕ್ಕದಲ್ಲಿ ಕೊಟ್ಟಿಗೆಯಿಂದ ಹಸುಗಳನ್ನು ಕಳವುಗೈಯ್ಯಲಾಗಿದೆ. ಹಸುಗಳನ್ನು ದರೋಡೆಗೈಯ್ಯಲು ಬಂದಾಗ ಕೊಟ್ಟಿಗೆಯಲ್ಲಿದ್ದ ಕರುವಿನ ಕೂಗು ಕೇಳಿ ಗೋವಿಂದ ಗೌಡ ಹಾಗೂ ಅವರ ಅಣ್ಣ ಗಿರಿಯ ಗೌಡ ಹೊರಗೆ ಬಂದು ಆರೋಪಿಗಳನ್ನು ತಡೆಯಲು ಮುಂದಾದಾಗ ಆರೋಪಿಗಳು ತಲವಾರು ಹಾಗೂ ಮಾರಕ ಆಯುಧಗಳಿಂದ ಬೆದರಿಸಿದ್ದರು ಎಂದು ತಿಳಿದುಬಂದಿದೆ. ಕಳುವಾಗಿರುವ ಹಸುಗಳ ಸುಮಾರು ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಗೋವಿಂದ ಗೌಡ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
Next Story