ಜೂಜಾಟ: ಒಂಭತ್ತು ಜನರ ಬಂಧನ
ಬೆಂಗಳೂರು, ಜೂ.13: ಹೊಟೇಲ್‌ನಲ್ಲಿ ಜೂಜಾಟ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಒಂಭತ್ತು ಜನರನ್ನು ಬಂಧಿಸಿ 72 ಸಾವಿರ ರೂ.ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸರವಣನ್, ದೀಪಕ್, ವೀರಪ್ಪನ್, ಕಲೀಂ, ಕಮಲಕಣ್ಣನ್, ಅಸ್ಗರ್, ಕಿರಣ್, ಮಂಜುನಾಥ, ಸಲೀಂ ಎಂದು ಗುರುತಿಸಲಾಗಿದೆ.
ಹೆಣ್ಣೂರು ರಿಂಗ್ ರೋಡ್ ಜಂಕ್ಷನ್‌ನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಹೊಟೇಲ್‌ನ 2ನೆ ಮಹಡಿಯಲ್ಲಿರುವ ಕೊಠಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಿಂದ 72 ಸಾವಿರ ರೂ. ನಗದು ವಶಪಡಿಸಿಕೊಂಡು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story





