ವೀರೇಂದ್ರ ಹೆಗ್ಗೆಡೆ ಹೆಸರು ಸೂಚನೆಗೆ ಸ್ವಾಗತ

ಮಂಗಳೂರು, ಜೂ.14: ದೇಶದ ಸರ್ವೋನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆಯ ಹೆಸರಿನ ಸೂಚನೆ ಅತ್ಯಂತ ಸೂಕ್ತವೂ ಸ್ವಾಗತಾರ್ಹವೂ ಆಗಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮಾಧಿಕಾರಿಯಾಗಿದ್ದುಕೊಂಡು ಸಮರ್ಥ ಆಡಳಿತಗಾರನಾಗಿ, ಸ್ವಾವಲಂಬಿ ಸಮಾಜದ ನಿರ್ಮಾಣಕ್ಕಾಗಿ ಕಟಿಬ ದ್ಧರಾಗಿದ್ದುಕೊಂಡು ವ್ಯಸನ ಮುಕ್ತ ಸಮಾಜಕ್ಕಾಗಿ, ಸೂಕ್ತ ಯೋಜನೆಗಳನ್ನೂ ರೂಪಿಸಿ ಯಶಸ್ವಿಯಾಗಿರುವ ಹೆಗ್ಗೆಡೆ, ಶೈಕ್ಷಣಿಕ ಹಾಗೂ ವೈದ್ಯಕೀಯ ಸಂಸ್ಥೆಗಳ ರೂವಾರಿಯಾಗಿ ರಾಷ್ಟ್ರೀಯ ಭಾವೈಕ್ಯ ಸಮಾಜದ ನಿರ್ಮಾಣದ ಕಾರ್ಯದಲ್ಲಿ ಸದಾ ತತ್ಪರರು.
ಸಜ್ಜನ ಗೃಹಸ್ಥರಾಗಿದ್ದುಕೊಂಡು ಸರ್ವರ ಮಾನ್ಯತೆಯನ್ನು ಹೊಂದಿರುವ ಅವರು ಶ್ರೇಷ್ಠ ವ್ಯಕ್ತಿಗಳ ಪಂಕ್ತಿಯ ಮುಂಚೂಣಿಯಲ್ಲಿದ್ದು, ಭಾರತದ ರಾಷ್ಟ್ರಪತಿ ಹುದ್ದೆಗೆ ಸೂಕ್ತ ಸೂಚನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Next Story