ಡೆಕ್ಕನ್ ವೆಲ್ಫೇರ್ ಅಸೋಸಿಯೇಶನ್ ನಿಂದ ಪುಸ್ತಕ ವಿತರಣೆ

ಭಟ್ಕಳ, ಜೂ. 14: ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್ ವತಿಯಿಂದ ಇಲ್ಲಿನ ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಕಾಲೇಜು ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಡೆಕ್ಕನ್ ವೆಲ್ಫೇರ್ ಕಚೇರಿಯಲ್ಲಿ ನಡೆಯಿತು.
ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್ ಅಧ್ಯಕ್ಷ ಮೊಹಿದ್ದೀನ್ ನಿಝಾಮ್ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಬಡ ವಿದ್ಯಾರ್ಥಿಗಳಿ ಪಠ್ಯ ಪುಸ್ತಕವನ್ನು ವಿತರಿಸುತ್ತಾ ಬಂದಿರುವ ನಮ್ಮ ಸಂಘಟನೆಯು ಈ ವರ್ಷವೂ ಪಠ್ಯ ಪುಸ್ತಕ ವಿತರಣೆ ಮಾಡುವುದರ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ. ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವಲ್ಲಿ ನಮ್ಮ ಸಹಾಯ ಸಹಕಾರ ಸದಾ ಇದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ.ನಸೀಮ್ ಅಹಮ್ಮದ್ ಖಾನ್, ಪ್ರಧಾನ ಕಾರ್ಯದರ್ಶಿ ನಝೀರ್ ಅಹಮ್ಮದ್, ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಶೇಖ್, ಖಜಾಂಚಿ ಮಹಮ್ಮದ್ ಝುಬೇರ್ ಫರೀದಾ, ಸದಸ್ಯರುಗಳಾದ ಅಮ್ಜದ್ ಅಲಿ, ಮುಹಮ್ಮದ್ ಗೌಸ್, ಐ.ಡಿ.ಖಾನ್, ಅಕ್ಬರ್ ಅಲಿ, ಶೌಖತ್ ಖತೀಬ್, ಜಕ್ರಿಯಾ ಮುಂತಾದವರು ಉಪಸ್ಥಿತರಿದ್ದರು.





