ರಕ್ತ ಸಿಗದೆ ಸಾಯುವವರನ್ನು ರಕ್ತದಾನ ಮಾಡುವುದರಿಂದ ಬದುಕಿಸಬಹುದು: ಡಾ. ಸುಂದರಗೌಡ

ಚಿಕ್ಕಮಗಳೂರು, ಜೂ.14: ವಿಶ್ವದಲ್ಲಿ ಪ್ರತಿ ವರ್ಷವು ಜೂ.14ನ್ನು ವಿಶ್ವ ರಕ್ತದಾನಿಗಳ ದಿನವೆಂದು ಆಚರಿಸಲಾಗುತ್ತದೆ. ಅವಘಡದಲ್ಲಿ ತೀವ್ರ ರಕ್ತಸ್ತಾವವಾಗಿ ಸಾಯುವವರನ್ನು ರಕ್ತದಾನ ಮಾಡುವುದರಿಂದ ಬದುಕಿಸಬಹುದು ಡಾ. ಸುಂದರೇಗೌಡ ಹೇಳಿದರು.
ಅವರು ಬುಧವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ವಿಶ್ವ ರಕ್ತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವ ಅತೀ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬ ಜೀವ ಉಳಿಸಲು ಉಪಯೋಗಿಸುವುದಾಗಿದೆ. ವ್ಯಕ್ತಿಯು ಸ್ವಯಂ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತನ್ನ ರಕ್ತವನ್ನು ನೀಡುವುದು ರಕ್ತದಾನವಾಗಿದೆ.ವಿಶ್ವ ರಕ್ತದಾನಿಗಳ ದಿನದಂದು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುವವರನ್ನು ಗೌರವಿಸುವುದಕ್ಕಾಗಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.
ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ಮಾತನಾಡಿ, ರಕ್ತಕ್ಕೆ ನಿರಂತರ ಬೇಡಿಕೆ ಇದೆ. ಪ್ರತಿ ದಿನವು ರಾಜ್ಯದಲ್ಲಿ 800ರಿಂದ 1100ಯುನಿಟ್‌ಗಳಷ್ಟು ರಕ್ತದ ಬೇಡಿಕೆ ಇದೆ.ಆದರೆ ಸ್ವಯಂ ಪ್ರೇರಿತರಾಗಿ 700 ರಿಂದ 800ಯುನಿಟ್ವರೆಗೆ ರಕ್ತವು ಪೂರೈಕೆ ಆಗುವುದರಿಂದ ತುರ್ತು ಸಂದರ್ಭಗಳಾದ ಅಪಘಾತಗಳು ಕ್ಯಾನ್ಸರ್ ಕಾಯಿಲೆಗಳು ಥ್ಯಾಲನೀಮಿಯೋ ಹಿಮೊಥೀರಿಯಂ ಎಂಬ ಕಾಯಿಲೆಗಳಿೆ ತುರ್ತು- ರಕ್ತದಾನ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿಸ್ವಯಂ ಪ್ರೇರಿತ ರಕ್ತದಾನಕ್ಕೆ ತುಂಬಾ ಮಹತ್ವವಿದೆ. ಒಮ್ನೆ ದಾನಿಯಿಂದ ಶೇಖರಿಸಿದ ರಕ್ತವು30 ದಿನ ಒಳಗೆ ಉಪಯೋಗವಾಗಬೇಕಿದೆ ಎಂದು ತಿಳಿಸಿದರು.
ಕೃತಕ ರಕ್ತ ಸಾದಸ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗಾಗ ರಕ್ತದಾನಕ್ಕೆ ಮುಂದಾಗಬೇಕಿದೆ. ಮುಖ್ಯವಾದ ವಿಷಯವೆನೆಂದರೆ ರಕ್ತಕ್ಕೆ ಪರ್ಯಾಯವಾದ ವಸ್ತುವಲ್ಲ ರಕ್ತವನ್ನು ಕೃತಕವಾಗಿ ಉತ್ತಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯನ ದಾನದಿಂದ ಮಾತ್ರ ಪಡೆಯಬಹುದು. ರಕ್ತದಾನದಿಂದ ಶರೀರಕ್ಕೆ ಯಾವುದೇ ತೊಂದರೆಗಳು ಆಗುವುದುದಿಲ್ಲ. ರಕ್ತ ದಾನಕ್ಕೆ ಗಂಡು ಹೆಣ್ಣು ಎಂಬ ಭೇದವಿಲ್ಲದೆ 18ರಿಂದ 60ವರ್ಷ ಒಳಗಿನ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು.
ರಕ್ತದಾನವು 3 ತಿಂಗಳಿಗೊಮ್ಮೆ ಹೆಂಗಸರಿಂದ ರಕ್ತದಾನವು ಗಂಡಸರಿಂದ 4 ತಿಂಗಳಿಗೊಮ್ಮೆ ಮಾಡಬಹುದು. ದಾನಿಯ ತೂಕವು 45ಕೆ.ಜಿ. ಗಿಂತ ಜಾಸ್ತಿ ಇರಬಾರದು. ರಕ್ತದ ಒತ್ತಡವು 12.5 ಗ್ರಾಂಗಿಂತ ಕಡಿಮೆ ಇರಬಾರದು. ರಕ್ತ ಒತ್ತಡವು 120/80 ಇರಬೇಕು. ರೋಗ ಪೀಡಿತರು, ವ್ಯಸನ ಪಿಡಿತರು,ಮಹಿಳೆಯರುಕೆಲ ಸಮಯದಲ್ಲಿ, ಕಾಯಿಲೆಗಾಗಿ ಲಸಿಕೆಗಳನ್ನು ತೆಗೆದುಕೊಂಡಾಗ, ಮಲೇರಿಂಾ ರೋಗ ಪೀಡಿತರಾಗಿದ್ದರೆ, ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ, ಯಾವುದೇ ವ್ಯಕ್ತಿಯ 3ತಿಂಗಳ ಹಿಂದೆ ರಕ್ತವನ್ನು ಅಥವಾ ರಕ್ತದ ಅಂಶವನ್ನು ಪಡೆದಿದ್ದಾರೆ. ಯಾವುದೇ ದೊಡ್ಡ ಪ್ರಮಾಣದ ಶಶ್ತ್ರಚಿಕಿತೆ್ಸಗೆ ಒಳಗಾದಿದ್ದರೆ, ಕಾಮಾಲೆ ಹೆಚ್‌ಐವಿ ಯ ಲೈಂಗಿಕ ರೋಗವಿವರುವರು ಮಧುಮೇಹ ಹೆಪಟೈಸ್ ಅಥವಾ ರಕ್ತ ಸ್ರಾವ ಹೆಪ್ಪಟ್ಟಿಗೆ ಬಿ. ಮತ್ತು ಸಿ ಮತ್ತು ಮೂತ್ರ ಪಿಂಡ ರೋಗ ಕಾಯಿಲೆ, ಮಾನಸಿಕ ರೋಗದ ವ್ಯಕ್ತಿ ರಕ್ತದಾನ ಮಾಡಬಾರದು ಎಂದು ನುಡಿದರು.
ಈ ಸಂದರ್ಭದಲ್ಲಿ ಎಂ.ಜಿ.ಆಸ್ಪತ್ರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಭಾಗ್ಯಕ್ಕ ಬ್ರಹ್ಮಕುಮಾರಿ ಸಮಾಜದ ಾತಾಜಿ, ರಕ್ತದಾನ ಕೇಂದ್ರ ಮುಖ್ಯಸ್ಥ ಡಾ. ಮುರಳೀಧರ್, ಅವೇರ್‌ನೆಸ್ಸ್ ಟ್ರಸ್ಟ್‌ನ ಸಂಸ್ಥಾಪಕಾದ್ಯಕ್ಷ ಅಲ್ತಾಫ್ ಬಿಳಗುಳ ಉಪಸ್ಥಿತರಿದ್ದರು







