ಬಂಟ್ವಾಳ ಸಹಿತ 4 ತಾಲೂಕುಗಳಲ್ಲಿ ಜೂ.21ರವರೆಗೆ ನಿಷೇದಾಜ್ಞೆ

ಬಂಟ್ವಾಳ, ಜೂ. 14: ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ಯುವಕನಿಗೆ ಚೂರಿ ಇರಿತ ಹಾಗೂ ಆ ಬಳಿಕ ನಡೆದ ಕಲ್ಲು ತೂರಾಟದಿಂದ ಪರಿಸರದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಜಾರಿಯಲ್ಲಿರುವ ನಿಷೇದಾಜ್ಞೆಯನ್ನು ಜೂನ್ 21ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೆಕ್ಷನ್ 144ರ ಅನ್ವಯ ಜೂ. 13ರ ರಾತ್ರಿ 12 ಗಂಟೆಯಿಂದ ಜೂ.14ರಂದು ರಾತ್ರಿ 12ರವರೆಗೆ ಬಂಟ್ವಾಳ ಸಹಿತ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ನಿಷೇದಾಜ್ಞೆ ಹೊರಡಿಸಲಾಗಿತ್ತು. ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆರವರ ಕೋರಿಕೆಯ ಮೇರೆಗೆ ನಿಷೇದಾಜ್ಞೆಯನ್ನು ಜೂ.21ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
Next Story





