23ರೊಳಗೆ ಎನ್‌ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಾಧ್ಯತೆ

ಹೊಸದಿಲ್ಲಿ,ಜೂ.14: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಇನ್ನಷ್ಟೇ ಘೋಷಿಸಬೇಕಿದೆ. ಆದಾಗ್ಯೂ ಜೂನ್ 23ರೊಳಗೆ ಎನ್‌ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಸುವುದು ಸಾಧ್ಯತೆಯಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಬಿಜೆಪಿಯ ರಾಷ್ಟ್ರಪತಿ ಚುನಾವಣಾ ಸಮಿತಿಯ ಸದಸ್ಯರಾದ ವೆಂಕಯ್ಯನಾಯ್ಡು ಹಾಗೂ ರಾಜ್‌ನಾಥ್‌ಸಿಂಗ್ ಮತ್ತು ಅರುಣ್‌ಜೇಟ್ಲಿ ಚುನಾವಣಾತ ಕಾರ್ಯತಂತ್ರದ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದರೆಂದು ಅವು ಹೇಳಿವೆ.
ಈ ಮಧ್ಯೆ ಎನ್‌ಡಿಎ ಹಾಗೂ ಪ್ರತಿಪಕ್ಷಗಳ ಗುಂಪೊಂದು, ಪರಸ್ಪರರಿಗೂ ಸ್ವೀಕರಾರ್ಹವಾಗುವಂತಹ ರಾಷ್ಟ್ರಪತಿಅಭ್ಯರ್ಥಿಯನ್ನು ಆಯ್ಕೆ ಮಾಡುವ ತಮ್ಮ ಪ್ರಯತ್ನವನ್ನು ತೀವ್ರಗೊಳಿಸಿವೆ. ಒಂದು ವೇಳೆ ಈ ಬಗ್ಗೆ ಸಹಮತವೇರ್ಪಡದಿದ್ದಲ್ಲಿ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಲೂ ಅವು ಸಿದ್ಧತೆ ನಡೆಸಿಎ.
Next Story





