ಹೊಳೆಗೆ ಬಿದ್ದು ಯುವಕ ಮೃತ್ಯು
ಮಂಗಳೂರು, ಜೂ. 14: ಯುವಕನೋರ್ವ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಅತ್ರಬೈಲು ಎಂಬಲ್ಲಿ ಬುಧವಾರ ನಡೆದಿದೆ.
ಮೃತರನ್ನು ಕುಂಜತ್ತಬೈಲು ನಿವಾಸಿ ಕಿಶೋರ್ ಸಾಲ್ಯಾನ್ (32) ಎಂದು ಗುರುತಿಸಲಾಗಿದೆ.
ಕಿಶೋರ್ ಬುಧವಾರ ಬೆಳಗ್ಗೆ 6 ಗಂಟೆಯಿಂದ 7ಗಂಟೆಯ ಮಧ್ಯೆ ಕುಂಬತ್‌ಬೈಲ್ ಮನೆಯಿಂದ ಕಾಲುದಾರಿಯಾಗಿ ಹೋಗುತ್ತಿದ್ದರು. ಅತ್ರಬೈಲು ಎಂಬಲ್ಲಿ ಹೊಳೆ ಬದಿಯಲ್ಲಿ ನೆರೆ ನೀರು ನಿಂತಿದ್ದು, ಈ ಸಂದರ್ಭದಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ನೀರು ಪಾಲಾಗಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ದೊರಕಿದೆ. ಈ ಬಗ್ಗೆ ಅವರ ಸಹೋದರ ಸತೀಶ್ ಸಾಲ್ಯಾನ್ ಎಂಬವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





