ನಂಬಿಸಿ ಮೋಸ: ಪೊಲೀಸರಿಗೆ ರೂಪದರ್ಶಿ ದೂರು
ಬೆಂಗಳೂರು, ಜೂ.14: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಯುವಕನ ವಿರುದ್ಧ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಗೆ ರೂಪದರ್ಶಿಯೊಬ್ಬರು ದೂರು ಸಲ್ಲಿಸಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಪ್ರಾಜೆಕ್ಟ್ ಇಂಜಿನಿಯರ್ (ಟೆಕ್ಕಿ) ಉಲ್ಲಾಸ್ ಪಟೇಲ್ ಎಂಬಾತನ ವಿರುದ್ಧ ರೂಪದರ್ಶಿ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಉಲ್ಲಾಸ್ ಹಾಗೂ ರೂಪದರ್ಶಿ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಜೂ. 3ರಂದು ಮೈಸೂರಿಗೆ ತೆರಳಿ ವಾಪಸ್ಸು ಬರುವಷ್ಟರಲ್ಲಿ ಉಲ್ಲಾಸ್ ನಾಪತ್ತೆಯಾಗಿದ್ದಾನೆ. ಬಳಿಕ ಮೊಬೈಲ್ ಮುಖಾಂತರ ಸಂಪರ್ಕಿಸಿ, ನಮ್ಮ ಮದುವೆಗೆ ಪೋಷಕರು ಒಪ್ಪುತ್ತಿಲ್ಲ ಎಂದು ಉಲ್ಲಾಸ್ ಹೇಳಿದ್ದಾನೆ. ಜೊತೆಗೆ ಉಲ್ಲಾಸ್ ತಾಯಿಯೂ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ರೂಪದರ್ಶಿ ಆರೋಪಿಸಿದ್ದಾರೆ.
ಜೂನ್ 2ರಂದು ಉಲ್ಲಾಸ್, ಆತನ ಸ್ನೇಹಿತ ಪ್ರೀತಮ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೂಪದರ್ಶಿ ದೂರಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ವಂಚನೆ ದೂರು ದಾಖಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.





