ಭೂ ನ್ಯಾಯ ಮಂಡಳಿಯಲ್ಲಿ 7.888 ಪ್ರಕರಣಗಳು ಬಾಕಿ: ಕಾಗೋಡು ತಿಮ್ಮಪ್ಪ

ಮಂಗಳೂರು, ಜೂ.15: ರಾಜ್ಯದ ಎಲ್ಲಾ ಭೂನ್ಯಾಯ ಮಂಡಳಿಯಲ್ಲಿ 7,888 ಪ್ರಕರಣಗಳು ಬಾಕಿ ಇದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ 48ಎ ಹಾಗೂ 77ಎ ರಡಿ ಸಲ್ಲಿಸಿರುವ ನಮೂನೆ 7 ಮತ್ತು 7ಎ ಅರ್ಜಿಗಳು ಭೂ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸರಕಾರ ಆದೇಶಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸರಕಾರವು ತನ್ನ ಆದೇಶದಲ್ಲಿ 15 ದಿನಗಳಿಗೊಮ್ಮೆ ಭೂ ನ್ಯಾಯ ಮಂಡಳಿಯು ಸಭೆ ಕರೆದು ವಿಚಾರಣೆ ನಡೆಸಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
Next Story





