ಜೆಪ್ಪು: ಆಧಾರ್ ನೋಂದಣಿ ಉದ್ಘಾಟನೆ

ಮಂಗಳೂರು, ಜೂ.15: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಜೆಪ್ಪು ಕೆಥೊಲಿಕ್ ಸಭಾದಲ್ಲಿ ನಡೆದ ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ಕೆಥೊಲಿಕ್ ಸಭಾದ ಆಡಳಿತಾಧಿಕಾರಿ ಸಿಸ್ಟರ್ ಸಿಲ್ವಿಯಾ ಫೆರ್ನಾಂಡಿಸ್ ಚಾಲನೆ ನೀಡಿದರು.
ಪ್ರಸೂತಿ ತಜ್ಞೆ ಡಾ. ಕವಿತಾ ಐವನ್ ಡಿಸೋಜ, ಕಾರ್ಪೋರೇಟರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ನಾಗೇಂದ್ರ ಕುಮಾರ್, ವಿಜಯ ಅಲ್ಫ್ರೆಡ್, ಕೆ. ಭಾಸ್ಕರ್ ರಾವ್, ಅನಿಲ್ ತೋರಸ್, ಗಣೇಶ್ ಕುಮಾರ್ ಸಾಲ್ಯಾನ್, ಶಶಿಕಾಂತ್ ಶೆಟ್ಟಿ, ನವೀನ್ ಸ್ಟೀವನ್ ಉಪಸ್ಥಿತರಿದ್ದರು.
ಲೂಸಿ ಡಿಸಿಲ್ವ ಸ್ವಾಗತಿಸಿ, ವಂದಿಸಿದರು. ಸತೀಶ್ ವೊನ್ಸೆಕಾ ಕಾರ್ಯಕ್ರಮ ನಿರೂಪಿಸಿದರು.
Next Story





