‘ಹಲವು ಧರ್ಮಗಳು: ಒಂದು ಭಾರತ’ ಸಹೋದರತಾ ಅಭಿಯಾನ
ಜೂ.16: ಯುನಿಟಿ ಹಾಲ್ ನಲ್ಲಿ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು,ಜೂ.15: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಉಳ್ಳಾಲ ಹಾಗೂ ಸೋಲಿಡಾರಿಟಿ ಯೂತ್ ಮೂಮೆಂಟ್ ನ ಸಹಯೋಗದಲ್ಲಿ ‘ಹಲವು ಧರ್ಮಗಳು: ಒಂದು ಭಾರತ’ ವಾರ್ಷಿಕ ಸಹೋದರತಾ ಅಭಿಯಾನದ ಪ್ರಯುಕ್ತ ನಗರದ ಕಲ್ಲಾಪುವಿನಲ್ಲಿರುವ ಯುನಿಟಿ ಹಾಲ್ ನಲ್ಲಿ ಜೂ.16 ರಂದು ಸಂಜೆ 5.15ಕ್ಕೆ ಸೌಹಾರ್ದ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್, ಸದ್ಭಾವನಾ ಮಂಚ್ ನ ಉಪಾಧ್ಯಕ್ಷರಾದ ಜೋಸ್ಲಿನ್ ಡಿಸೋಜ, ಹಾಗೂ ಎಸ್ ಐ ಓ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
Next Story





