ಮೀನು ಮರಿಗಳ ವಿತರಣೆ
ಮಂಗಳೂರು, ಜೂ.15:ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ/ರೋಹು/ಸಾಮಾನ್ಯ ಗೆಂಡೆ ಜಾತಿಯ ಮೀನು ಮರಿಗಳನ್ನು ಜುಲೈ/ ಅಗಸ್ಟ್/ಸೆಪ್ಟೆಂಬರ್ ತಿಂಗಳಿನಲ್ಲಿ ಸರಕಾರ ನಿಗದಿ ಪಡಿಸಿದ ದರದಂತೆ ವಿತರಿಸಲಾಗುವುದು.
ಆಸಕ್ತ ಮೀನು ಕೃಷಿಕರು ಮೀನುಮರಿಗಳಿಗೆ ಬೇಡಿಕೆಯೊಂದಿಗೆ ಕೊಳದ ವಿವರ, ವಿಸ್ತೀರ್ಣದ ವಿವರವನ್ನೂ ನೀಡಬೇಕು.
ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮಾಹಿತಿ ಕೇಂದ್ರ ಕಟ್ಟಡ, ಸೌತ್ ವಾರ್ಫ್, ಬಂದರು, ಮಂಗಳೂರು-575001. (ದೂ.ಸಂ: 0824-2421680/ ಮೊ.ಸಂ: 8618976016) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





