ಪ್ರಸವಪೂರ್ವ ಭ್ರೂಣಲಿಂಗ ಪತ್ತೆ: ಹತ್ತು ಕೇಂದ್ರಗಳಿಗೆ ನೋಟೀಸು
ಉಡುಪಿ, ಜೂ.15: ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿಯು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯಡಿ ಹಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ವ್ಯವಸ್ಥೆ ಲೋಪದ ಸಂಬಂಧ ಹತ್ತು ಕೇಂದ್ರಗಳಿಗೆ ನೋಟೀಸು ನೀಡಲಾಗಿದೆ ಎಂದು ಡಾ.ರಾಮರಾವ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಕ್ಷಮ ಪ್ರಾಧಿಕಾರ ಪ್ರಸವಪೂರ್ವ ್ರೂಣಲಿಂಗ ಪತ್ತೆ ತಡೆಗೆ ಹೆಚ್ಚಿನ ನಿಗಾ ವಹಿಸಿದ್ದು ಈ ಸಂಬಂಧ ಯಾವುದೇ ಕಾನೂನು ಉಲ್ಲಂಘನೆ ವರದಿಯಾಗಿಲ್ಲ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅ್ಯಕ್ಷತೆಯಲ್ಲಿಬುಧವಾರ ನಡೆದ ಸಬೆಯಲ್ಲಿ ಮಾತನಾಡಿದ ಅವರು ,ಜಿಲ್ಲೆಯಲ್ಲಿ ಸಕ್ಷಮ ಪ್ರಾಧಿಕಾರ ಪ್ರಸವಪೂರ್ವ್ರೂಣ ಲಿಂಗಪತ್ತೆ ತಡೆಗೆ ಹೆಚ್ಚಿನನಿಗಾ ವಹಿಸಿದ್ದು ಈಸಂಬಂಧ ಯಾವುದೇ ಕಾನೂನು ಉಲ್ಲಂಘನೆ ವರದಿಯಾಗಿಲ್ಲ ಎಂದರು. ಸ್ಕಾನಿಂಗ್ ಮೆಷಿನ್ ನೋಂದಣಿ, ನವೀಕರಣ, ಮೊಬೈಲ್ ಯುನಿಟ್ ಮಾದರಿ ಬಳಕೆಯಾಗಿದ್ದು ಈ ರೀತಿಯ ಬಳಕೆಗೆ ಕಾನೂನು ಪಾಲಿಸಿ ಎಂದು ಹೇಳಿದರು. ಹೃದಯ ಸಂಬಂಧಿ ಉಚಿತ ವೈದ್ಯಕೀಯ ಶಿಬಿರಗಳಿಗೆ ಇಕೋ ಯಂತ್ರವನ್ನು ತೆಗೆದುಕೊಂಡು ಹೋಗಲು ಜಿಲ್ಲಾಧಿಕಾರಿ ಅನುಮತಿ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ 5 ಸ್ಕಾನಿಂಗ್ ಸೆಂಟರ್ ನವೀಕರಣಕ್ಕೆ, 5 ಹೊಸ ಯಂತ್ರ ಅಳವಡಿಕೆಗೆ ಕೋರಿ ಬಂದ ಅರ್ಜಿಗಳ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಡಾ.ಪ್ರತಾಪ್ ಕುಮಾರ್, ಡಾ.ದಮಯಂತಿ, ಡಾ.ಆಮ್ನಾ ಹೆಗ್ಡೆ, ಸಮಾಜ ಸೇವಕಿ ಗೀತಾ ವಾಗ್ಲೆ, ಶೋಭಾ ಎಂ ಹೆಗ್ಡೆ, ಜ್ಯೋತಿ ಶೆಟ್ಟಿ, ವಾಸಂತಿ ರಾವ್, ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.